97
ತಿರುವನಂತಪುರಂ : ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದೊಂದು ತಿಂಗಳಿಂದ ನಿಂತಿದ್ದ ಬ್ರಿಟನ್‌ನ ದುಬಾರಿ ಯುದ್ಧ ವಿಮಾನ ಎಫ್-35ಬಿ ಕೊನೆಗೂ ದುರಸ್ತಿಯಾಗಿ ಮಂಗಳವಾರ ತನ್ನ ದೇಶಕ್ಕೆ ವಾಪಸಾಗಿದೆ.
ಬ್ರಿಟಿಷ್ ಈ-35ಬಿ ಸ್ಟೈಲ್ತ್ ಫೈಟರ್ ಜೆಟ್ ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಒಂದು ತಿಂಗಳಿಗೂ ಹೆಚ್ಚು ಕಾಲದ ನಂತರ ಕೊನೆಗೂ ಅದು ತನ್ನ ಬ್ರಿಟನ್ ದೇಶದತ್ತ ಟೇಕ್ ಆಫ್ ಆಗಿದೆ.
ಇದು ಜೂನ್ 14 ರಂದು ಬ್ರಿಟನ್ ನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಹೈಡ್ರಾಲಿಕ್ ವೈಫಲ್ಯದಿಂದಾಗಿ ಬ್ರಿಟನ್ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಇದರ ದುರಸ್ತಿ ಕಾರ್ಯ ಕ್ಕಾಗಿ ಹಲವು ಪ್ರಯತ್ನಗಳನ್ನೂ ನಡೆಸಲಾಗಿದ್ದು, ಏನು ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ಇದನ್ನು ಬಿಡಿ ಭಾಗಗಳನ್ನಾಗಿ ಮಾಡಿ ವಾಪಸ್ ತೆಗೆದುಕೊಂಡು ಹೋಗುವ ನಿರ್ಧಾರವನ್ನೂ ಕೈಗೊಳ್ಳಲಾಗಿತ್ತು

