Home » ಪಾಕಿನ 8 ಏರ್‌ಬೇಸ್ ಗೆ ಭಾರತ ಬಾಂಬ್
 

ಪಾಕಿನ 8 ಏರ್‌ಬೇಸ್ ಗೆ ಭಾರತ ಬಾಂಬ್

by Kundapur Xpress
Spread the love

ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ನಡುವೆ ಸಮರ ಮತ್ತೊಂದು ಹಂತ ತಲುಪಿದ್ದು ಪಾಕಿಸ್ತಾನದಿಂದ ಭಾರತದ 4 ವಾಯುನೆಲೆಗಳ ಮೇಲೆ ದಾಳಿ ಯತ್ನ ನಡೆದಿದೆ. ಆದರೆ ಇದನ್ನು ಹಿಮ್ಮೆಟ್ಟಿಸಿರುವ ಭಾರತ. ನಂತರ 8 ವಾಯು ನೆಲೆಗಳ ಮೇಲೆ ಭಾರತದ ಪ್ರತಿದಾಳಿ ನಡೆಸಿ ಭಾರಿ ಹಾನಿ ಮಾಡಿದೆ

ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಗುಜರಾತ್, ರಾಜಸ್ಥಾನದ ಜನವಸತಿ ಪ್ರದೇಶ ಗುರಿಯಾಗಿಸಿಕೊಂಡು ಪಾಕಿಸ್ತಾನ  ನಡೆಸಿದ ಅಪ್ರಚೋದಿತ ದಾಳಿ ನಡೆಸಿತ್ತು. ಬಳಿಕ ಭಾರತದ 4 ವಾಯು ನೆಲೆಗಳ ಮೇಲೆ ದಾಳಿಗೆ ಯತ್ನಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ವಾಯುನೆಲೆ ಹಾಗೂ ಏರ್‌ಫೀಲ್ಡ್‌ಗಳು ಸೇರಿ ಎಂಟು ಕಡೆ ಕ್ಷಿಪಣಿ ಮತ್ತು ಡೋನ್‌ಗಳನ್ನು ಬಳಸಿ ಪ್ರತಿ ದಾಳಿ ನಡೆಸಿದೆ. ದಾಳಿಯಲ್ಲಿ ಪಾಕ್ ನ ವಾಯುನೆಲೆಗಳಿಗೆ ತೀವ್ರ ಹಾನಿಯಾಗಿದೆ ಎಂದು ಭಾರತೀಯ ಸೇನೆ ಹೇಳಿದೆ

ದಾಳಿಯ ತೀವ್ರತೆಗೆ ಪಾಕಿಸ್ತಾನದ ಒಂದೆರಡು ಏರ್‌ಬೇಸ್ ಗಳಲ್ಲಿ ಭಾರೀ ಕಂದಕ ನಿರ್ಮಾಣವಾಗಿದೆ. ಹಾಗಾಗಿ ಸದ್ಯಕ್ಕೆ ಅಲ್ಲಿಂದ ವಿಮಾನಗಳನ್ನು ಹಾರಿಸುವ ಪರಿಸ್ಥಿತಿ ಇಲ್ಲ ಎಂದು ಹೇಳಲಾಗಿದೆ.

 

Related Articles

error: Content is protected !!