ನವದೆಹಲಿ: ‘2047ರೊಳಗೆ ದೇಶವನ್ನು ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಮಾಡಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಹೆಬ್ಬಯಕೆ. ಜನರ ಜತೆ ನೇರ ಸಂಪರ್ಕ ಹೊಂದಿರುವ ಕಾರಣ ರಾಜ್ಯಗಳೂ ಈ ಗುರಿ ಈಡೇರಿಕೆಗೆ ಸಕ್ರಿಯ ಪಾತ್ರ ನಿರ್ವಹಿಸಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ‘ಈಗಾಗಲೇ ಕೆಲವು ರಾಜ್ಯಗಳು ‘ಶೂನ್ಯ ಬಡತನ’ ಕಲ್ಪನೆಯೊಂದಿಗೆ ಬಡತನ ನಿರ್ಮೂಲನಾ ಆಂದೋಲನ ಹಮ್ಮಿಕೊಂಡಿದ್ದು, ಇದನ್ನು ಗ್ರಾಮ ಮಟ್ಟದಲ್ಲೇ ನಡೆಸಬೇಕು ಹಾಗೂ ಮೌಲ್ಯಮಾಪನದ ನಂತರ ‘ಶೂನ್ಯ ಬಡತನ ಗ್ರಾಮ’ ಎಂದು ಘೋಷಿಸಬೇಕು’ ಎಂದು ಕರೆ ನೀಡಿದ್ದಾರೆ
‘ವಿದೇಶೀ ನೇರ ಬಂಡವಾಳ ಹೂಡಿಕೆ ಬಗ್ಗೆ ರಾಜ್ಯ-ರಾಜ್ಯಗಳ ನಡುವೆಯೇ ಸ್ಪರ್ಧೆ ಏರ್ಪಡಬೇಕು ಎಂಬುದು ಮೋದಿ ಬಯಸಿದರು. ಇದರಿಂದಾಗಿ ಹೂಡಿಕೆಗಳು ಎಲ್ಲಾ ರಾಜ್ಯಗಳಿಗೆ ತಲುಪಬಹುದು. ಅದರಲ್ಲೂ ವಿಶೇಷವಾಗಿ ಕಮ್ಮಿ ಪ್ರಮಾಣದಲ್ಲಿ ಅಭಿವೃದ್ಧಿಯಲ್ಲಿ ಯಶ ಕಂಡಿರುವ ರಾಜ್ಯಗಳಿಗೂ ತಲುಪಬಹುದು ಎಂದು ಅಭಿಪ್ರಾಯಪಟ್ಟರು’ ಎಂದರು.