59
ವಡೋದರಾ : ಬುಧವಾರ ಸಂಭವಿಸಿದ ಗುಜರಾತ್‌ನ ಗಂಭೀರಾ ಸೇತುವೆ ಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೇರಿದೆ. ಕುಸಿತದಲ್ಲಿ ಕಣ್ಮರೆಯಾಗಿರುವ 3-4 ಜನರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಸಾಗರ ನದಿಗೆ ಅಡ್ಡಲಾಗಿ ಕಟ್ಟಿದ್ದ ಗಂಭೀರಾ ಸೇತುವೆ ಬುಧವಾರ ಕುಸಿದಿತ್ತು. ಈ ವೇಳೆ ಸೇತುವೆ ಮೇಲಿದ್ದ ಹಲವು ವಾಹನಗಳು ನದಿಗೆ ಬಿದ್ದ ಪರಿಣಾಮ ಭಾರೀ ದುರ್ಘಟನೆ ಸಂಭವಿಸಿತ್ತು.

