Home » ಚೀನಾ, ಪಾಕ್ ಪ್ರಭಾವ ತಗ್ಗಿಸಲು ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಕ್ಕೆ ಮೋದಿ
 

ಚೀನಾ, ಪಾಕ್ ಪ್ರಭಾವ ತಗ್ಗಿಸಲು ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಕ್ಕೆ ಮೋದಿ

by Kundapur Xpress
Spread the love

ನವದೆಹಲಿ : ಬಾಂಗ್ಲಾದೇಶ, ಮಾಲ್ಡೀವ್ಸ್ ಸೇರಿದಂತೆ ನೆರೆಹೊರೆ ದೇಶ ಬುಟ್ಟಿಗೆ ಹಾಕಿಕೊಂಡು ಭಾರತವನ್ನು ಒಬ್ಬಂಟಿ ಮಾಡಲು ಚೀನಾ ಮತ್ತು ಪಾಕಿಸ್ತಾನ ಸಂಚು ರೂಪಿಸುತ್ತಿರುವ ಹೊತ್ತಿನಲ್ಲೇ, ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ಮಾಲ್ಡೀವ್ಸ್ ಗೆ ಭೇಟಿ ನೀಡುವ ಸಾಧ್ಯತೆ ಇದೆ.

ಜು.26ರಂದು ಮಾಲ್ಡೀವ್ಸ್ ನ ಸಾತಂತ್ರ್ಯ ದಿನಾಚರಣೆ ಇದ್ದು, ಅದರಲ್ಲಿ ಭಾಗಿಯಾಗುವಂತೆ ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಮುಯಿಜು ಮೋದಿಯನ್ನು ಆಹ್ವಾನಿಸಿದ್ದಾರೆ. ಈ ಭೇಟಿ ಮಾಲ್ಡೀವ್ಸ್ ಮೇಲಿನ ಪಾಕ್, ಚೀನಾ ಪ್ರಭಾವ ಕಡಿತಕ್ಕೆ ನೆರವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೋದಿ ಆಹ್ವಾನ ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಕಳೆದ ವರ್ಷ, ಚೀನಾ ಪ್ರಭಾವಕ್ಕೆ ಒಳಗಾಗಿ ಮಾಲ್ಡೀವ್ಸ್ ಭಾರತ ವಿರೋಧಿ ನೀತಿ ಪ್ರದರ್ಶನ ಮಾಡಿತ್ತಾದರೂ, ಭಾರತ . ಸರ್ಕಾರ ಅದನ್ನು ಜಾಣತನದಿಂದ ಎದುರಿಸಿತ್ತು.

 

Related Articles

error: Content is protected !!