Home » ಇದು ಹಳೇ ವೈರಸ್‌ ಆತಂಕ ಬೇಡ : ಕೇಂದ್ರ
 

ಇದು ಹಳೇ ವೈರಸ್‌ ಆತಂಕ ಬೇಡ : ಕೇಂದ್ರ

by Kundapur Xpress
Spread the love

ನವದೆಹಲಿ : ‘ಎಚ್‌ಎಂಪಿವಿ ಹೊಸ ವೈರಸ್ ಅಲ್ಲ ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ಇದನ್ನು ಮೊದಲು 2001 ರಲ್ಲಿ ಗುರುತಿಸಲಾಯಿತು ಮತ್ತು ಇದು ಹಲವು ವರ್ಷಗಳಿಂದ ಇಡೀ ಪ್ರಪಂಚದಲ್ಲಿ ಹರಡುತ್ತಿದೆ. ಅಲ್ಲದೆ ಎಚ್‌ಎಂಪಿವಿ ವೈರಾಣು ಈಗಾಗಲೇ ವಿಶ್ವದಲ್ಲೇ ಚಾಲ್ತಿಯಲ್ಲಿರುವ ವೈರಾಣುವಾ ಗಿದ್ದು, ಅದರಲ್ಲಿ ಭಾರತವೂ ಇದೆ. ಆದರೆ ಇದನ್ನು ಎದುರಿಸಲು ಸರ್ವ ಸನ್ನದ್ಧವಾಗಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.

ಐಸಿಎಂಆರ್ ತಜ್ಞರು ಕೂಡ ಇದೇ ತೆರನಾದ ಹೇಳಿಕೆ ನೀಡಿ, ‘ಕೆಲ ಪ್ರಕರಣಗಳು ಪತ್ತೆಯಾದ ಹೊರತಾಗಿಯೂ, ಸದ್ಯ ಭಾರತದಲ್ಲಿ ಇನ್ ಪ್ಯೂಯೆಂಜಾ ರೀತಿಯ ಕಾಯಿಲೆ ಅಥವಾ ತೀವ್ರ ತೆರನಾದ ಉಸಿರಾಟದ ತೊಂದರೆಯ ವ್ಯಾಧಿಗಳ ಅಸಹಜ ಬೆಳವಣಿಗೆ ಕಂಡುಬಂದಿಲ್ಲ ಎಂಬುದು ಐಸಿಎಂಆರ್, ಐಡಿಎಸ್‌ಪಿಗಳ ದತ್ತಾಂಶಗಳಿಂದ ಕಂಡುಬಂದಿದೆ’ ಎಂದಿದೆ. ಇನ್ನು, ನಡ್ಡಾ ಮಾತನಾಡಿ, ಸ್ಥಿತಿಯನ್ನು ಅವಲೋಕಿಸಲು ಜ.4 ರಂದು ಉನ್ನತ ಸಭೆ ನಡೆಸಲಾಗಿದೆ. ಆರೋಗ್ಯ ಸವಾಲುಗಳಿಗೆ ತ್ವರಿತ ವಾಗಿ ಪ್ರತಿಕ್ರಿಯಿಸಲು ದೇಶವು ಸಿದ್ಧವಾಗಿದೆ. ಚಿಂತೆಗೆ ಕಾರಣವಿಲ್ಲ ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದಿದ್ದಾರೆ

 

Related Articles

error: Content is protected !!