Home » ಬಲಿಷ್ಠ ಭಾರತದಿಂದ ಸಮೃದ್ದ ವಿಶ್ವ
 

ಬಲಿಷ್ಠ ಭಾರತದಿಂದ ಸಮೃದ್ದ ವಿಶ್ವ

ಭಾರತ ಶೀಘ್ರದಲ್ಲೇ 3ನೇ ಅತೀ ದೊಡ್ಡ ಆರ್ಥಿಕತೆ

by Kundapur Xpress
Spread the love

ಅಕ್ರಾ (ಘಾನಾ) : ಭಾರತವು ಜಗತ್ತಿನ ‘ಶಕ್ತಿ ಸ್ತಂಭವಾಗಿದೆ. ಬಲಿಷ್ಠ ಭಾರತವು ಹೆಚ್ಚು ಸ್ಥಿರ ಮತ್ತು ಸಮೃದ್ಧ ಜಗತ್ತಿಗೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 2 ದಿನಗಳ ಘಾನಾ ದೇಶದ ಪ್ರವಾಸದಲ್ಲಿರುವ ಅವರು, ಗುರುವಾರ ಘಾನಾ ಸಂಸತ್ತನ್ನುದ್ದೇಶಿಸಿ ಮಾತನಾಡಿದರು.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತವು ಜಗತ್ತಿನ ಶಕ್ತಿ ಸ್ತಂಭವಾಗಿದೆ. ಬಲಿಷ್ಠಭಾರತವು ಹೆಚ್ಚು – ಸ್ಥಿರ ಮತ್ತು ಸಮೃದ್ಧ ಜಗತ್ತಿಗೆ ಕೊಡುಗೆ ನೀಡುತ್ತದೆ. ಸ್ಥಿರ ರಾಜಕೀಯ ಮತ್ತು ಆಡಳಿತದ ಅಡಿಪಾಯದ ಮೇಲೆ ಭಾರತವು ಶೀಘ್ರದಲ್ಲೇ 3ನೇಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಅವರು ಭಾರತದಲ್ಲಿ 2500 ರಾಜಕೀಯ ಪಕ್ಷಗಳಿವೆ. ಪ್ರಜಾಸತ್ತೆಗೆ ಅನುಗುಣವಾಗಿ ಅಲ್ಲಿ ಕೆಲಸ ಮಾಡಲಾಗುತ್ತದೆ ಎಂದರು. 2500 ರಾಜಕೀಯ ಪಕ್ಷಗಳಿವೆ ಎಂಬುದನ್ನು ಅರಿತು ಘಾನಾ ಸಂಸದರು ಸ್ತಂಭೀಭೂತರಾದರು.

 

Related Articles

error: Content is protected !!