ಗುರುಗ್ರಾಮ: 5 ಬಾರಿ ಹರ್ಯಾಣದ ಮುಖ್ಯಮಂತ್ರಿಯಾಗಿದ್ದ ಭಾರತೀಯ ರಾಷ್ಟ್ರೀಯ ಲೋಕ ದಳ (ಐಎನ್ ಎಲ್ ಡಿ) ಅಧ್ಯಕ್ಷ ಓಂ ಪ್ರಕಾಶ್ ಚೌಟಾಲ (89 ವರ್ಷ) ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಚೌಟಾಲ ಮಾಜಿ ಉಪ ಪ್ರಧಾನಿಯಾಗಿದ್ದ ದೇವಿಲಾಲ್ ಅವರ ಪುತ್ರ. ಅವರು ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಚೌಟಾಲಾ ಸಾವಿಗೆ ಪ್ರಧಾನಿ ಮೋದಿ ಸೇರಿ ಹಲವರು ಶೋಕಿಸಿದ್ದಾರೆ.
2 ಹಗರಣದಲ್ಲಿ ಜೈಲು ಸೇರಿದ್ದರು :
5 ಸಲ ಸಿಎಂ ಆಗಿದ್ದ ಚೌಟಾಲ, ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪುತ್ರ ಅಜಯ್ ಚೌಟಾಲ ಜತೆ ಜೈಲಿಗೆ ಹೋಗಿದ್ದರು. 2013ರಲ್ಲಿ ಜೈಲು ಸೇರಿದ್ದ ಅವರು 2021 ರ ತನಕವೂ ಜೈಲಿನಲ್ಲಿದ್ದರು. ನಂತರ ಅಕ್ರಮ ಆಸ್ತಿ ಹಗರಣದಲ್ಲಿ 2022ರಲ್ಲಿ 4 ವರ್ಷ ದೋಷಿ ಎಂದು ಪರಿಗಣಿಸಲ್ಪಟ್ಟಿದ್ದರು.