ಮಹಾರಾಷ್ಟ್ರ : ಮುಂಬೈ ಹಾಗೂ ಸುತ್ತಮುತ್ತ ಸೋಮವಾರ 6 ಗಂಟೆಗಳ ಕಾಲ ಸುರಿದ 30 ಸೇ.ಮೀ. ಮಳೆ ಭಾರಿ ಅನಾಹುತ ಸೃಷ್ಠಿಮಾಡಿದೆ ಮುಂಬೈಯ ಜನಜೀವನ ಸಂಪೂರ್ಣ ಸ್ತಬ್ದವಾಗಿದ್ದು ರೈಲ್ವೆ ಹಳಿಗಳ ಮೇಲೆ ನೀರು ನಿಂತಿದ್ದರಿಂದ ರೈಲು ಸೇವೆಗಳ ಮೇಲೆ ತೀವೃ ಪರಿಣಾಮ ಬೀರಿತು ಮಳೆಯಿಂದಾಗಿ 50 ವಿಮಾನ ಸಂಚಾರ ರದ್ದಾಯಿತು
ಮಳೆಯ ಅನಾಹುತದಿಂದಾಗಿ ನಗರದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂ ಡಿದ್ದು, ವಾಹನ ಸಂಚಾರದ ಮೇಲೆ ಪರಿಣಾಮ ಬೀರಿತು. ಮುಂಬೈ, ರತ್ನಾಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳ ಎಲ್ಲಾ ಶಾಲೆಗಳಿಗೆ ರಾಜ್ಯ ಸರ್ಕಾರ ರಜೆ ಘೋಷಿಸಿತ್ತು.
ಮಳೆಯ ಅಬ್ಬರದಿಂದಾಗಿ ಹಲವು ಶಾಸಕರು ಮತ್ತು ಅಧಿಕಾರಿಗಳು ವಿಧಾನ ಭವನಕ್ಕೆ ತೆರಳಲು ಸಾಧ್ಯವಾಗದ ಕಾರಣ ಮಹಾರಾಷ್ಟ್ರ ವಿಧಾನಮಂಡಲದ ಉಭಯ ಸದನಗಳನ್ನು ಮುಂದೂಡಲಾಯಿತು.ಈ ನಡುವೆ ಅಗತ್ಯವಿಲ್ಲದ ಹೊರತು ಮನೆಯಿಂದ ಹೊರಬರಬೇಡಿ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮುಂಬೈ ನಿವಾಸಿಗಳಿಗೆ ಮನವಿ ಮಾಡಿದ್ದಾರೆ.