Home » ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಐ ಎ ಎಫ್‌ ತಾಲೀಮು
 

ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಐ ಎ ಎಫ್‌ ತಾಲೀಮು

by Kundapur Xpress
Spread the love

ಶಹಜಹಾನ್‌ಪುರ : ಪಹಲ್ಯಾಮ್ ನಲ್ಲಿ ನಡೆದ ಉಗ್ರ ದಾಳಿ ಬಳಿಕ ಪಾಕಿಸ್ತಾನಕ್ಕೆ ದಾಳಿಯ ಮೂಲಕ ಪ್ರತ್ಯುತ್ತರ ನೀಡಲು ಭಾರತ ಯುದ್ಧ ಸನ್ನದ್ದತೆಯಲ್ಲಿದ್ದು ವಾಯುಸೇನೆ (ಐಎಎಫ್) ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿನ 3.5 ಕಿ.ಮೀ ವ್ಯಾಪ್ತಿಯ ಗಂಗಾ ಎಕ್ಸ್‌ಪ್ರೆಸ್‌ ವೇ ಎರ್‌ ಸ್ಟ್ರಿಪನಲ್ಲಿ ಬಹುನಿರೀಕ್ಷಿತ ಲ್ಯಾಂಡಿಂಗ್ ಮತ್ತು ಟೇಕಾಫ್ ಅಣಕು ಪ್ರದರ್ಶನವನ್ನು ಶುಕ್ರವಾರ ಆರಂಭಿಸಿದೆ.

ವಾಯುಸೇನೆಯ ವಿವಿಧ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಅಣಕು ಪ್ರದರ್ಶನ ಗಂಗಾ ಎಕ್ಸ್‌ಪ್ರೆಸ್‌ವೇ ಏರ್‌ಸ್ಟ್ರಿಪ್‌ನಲ್ಲಿ ಶುಕ್ರವಾರ ಆರಂಭಿಸಿತು. ರಾತ್ರಿ ವೇಳೆ 7.00ರಿಂದ 10.00 ಗಂಟೆವರೆಗೆ ಅಣಕು ಪ್ರದರ್ಶನ ನಡೆಸಲಾಗುತ್ತಿದೆ.

ಹಗಲು ಮಾತ್ರವಲ್ಲದೆ ರಾತ್ರಿಯೂ ಯುದ್ಧ ವಿಮಾನಗಳನ್ನು ಲ್ಯಾಂಡಿಂಗ್ ಮಾಡಬಹುದಾದ ವಿಶೇಷ ಸಾಮರ್ಥ್ಯವೇ ಗಂಗಾ ಎಕ್ಸ್‌ ಪ್ರೆಸ್‌ವೇ ಏರ್ ಸ್ಟ್ರಿಪ್‌ನ ವಿಶೇಷತೆ. ಈ ಹಿಂದೆ ಲಕ್ಷ್ಮೀ-ಆಗ್ರಾ ಮತ್ತು ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಏರ್‌ಸ್ಟ್ರಿಪ್‌ನಲ್ಲಿ ವಾಯುಸೇನೆ ಲ್ಯಾಂಡಿಂಗ್-ಟೇಕಾಫ್ ಅಣಕು ಪ್ರದರ್ಶನ ಹಗಲು ನಡೆಸಿತ್ತಾದರೂ, ರಾತ್ರಿ ಸಮಯದಲ್ಲಿ ಲ್ಯಾಂಡಿಂಗ್ ನಡೆಸಲು ಸಾಧ್ಯವಾಗುತ್ತಿರಲಿಲ್ಲ.

ಐಎಎಫ್ ಗಂಗಾ ಎಕ್ಸ್‌ಪ್ರೆಸ್‌ವೇ ಏರ್‌ಸ್ಟ್ರಿಪ್‌ನಲ್ಲಿ ನಡೆಸಿದ ಬಹುನಿರೀಕ್ಷಿತ ಲ್ಯಾಂಡಿಂಗ್ ಮತ್ತು ಟೇಕಾಫ್ ಅಣಕು ಪ್ರದರ್ಶನದಲ್ಲಿನ ಅದ್ಭುತ ಕ್ಷಣಗಳನ್ನು ಶಾಲಾ ಮಕ್ಕಳು, ಸ್ಥಳೀಯರು ಕಣ್ಣುಂಬಿಕೊಂಡರು. ಹಗಲು ಮತ್ತು ರಾತ್ರಿ ವೇಳೆ ಕೆಳಮಟ್ಟದಲ್ಲಿ ಹಾರಾಟ, ಲ್ಯಾಂಡಿಂಗ್ ಮತ್ತು ಟೇಕ್‌ಆಫ್ ಸೇರಿದಂತೆ ವಿವಿಧ ಅಭ್ಯಾಸ ಕಸರತ್ತುಗಳನ್ನು ವಾಯುಸೇನೆ ನಡೆಸುತ್ತಿದೆ. ಪರ್ಯಾಯ ರನ್‌ವೇ ರೀತಿಯಲ್ಲಿ ಬಳಸಬಹುದಾದ ಗಂಗಾ ಎಕ್ಸ್‌ಪ್ರೆಸ್‌ವೇ ಸಾಮರ್ಥ್ಯ ವಾಯುಸೇನೆ ಅಣಕು ಪ್ರದರ್ಶನ ಮತ್ತು ಅಭ್ಯಾಸ ನಡೆಸಲು ಸೂಕ್ತವಾಗಿದೆ.

 

Related Articles

error: Content is protected !!