ನವದೆಹಲಿ : ಪ್ರವಾಸೋದ್ಯಮ ಹಾಗೂ ಸೇನಾ ಸಹಕಾರ ಸಂಬಂಧ ಭಾರತದ ಜೊತೆ ವಿನಾಕಾರಣ ಕಿತ್ತಾಡಿಕೊಂಡಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು, ಈಗ ತಮ್ಮ ನಿಲುವು ಬದಲಿಸಿ ತಣ್ಣಗಾಗಿದ್ದಾರೆ. ‘ಮಾಲ್ವಿನ್ಸ್ ಮೊದಲು ಎಂಬ ನಮ್ಮ ನೀತಿ ಯಾವುದೇ ಕಾರಣಕ್ಕೂ ಭಾರತದೊಂದಿಗೆ ನಾವು ಹೊಂದಿರುವ ಸುದೀರ್ಘ ಸಂಬಂಧಕ್ಕೆ ಅದರಲ್ಲೂ ವಿಶೇಷವಾಗಿ ಭಾರತದ ಭದ್ರತೆಗೆ ಹಾನಿ ಮಾಡುವಂಥ ಯಾವುದೇ ಕ್ರಮಗಳಿಗೂ ಎಂದು ಅವರು ಭರವಸೆ ನೀಡಿದ್ದಾರೆ ಜೊತೆಗೆ ಭಾರತವು ಮಾಲ್ಮೀವ್ ಸಾಮಾಜಿಕ – ಆರ್ಥಿಕ ವಲಯದ ಪ್ರಮುಖ ಮೌಲ್ಯಯುತ ಪಾಲುದಾರ. ಮಾಲ್ಮೀವ್‌ಗೆ ಇಷ್ಟು ವರ್ಷ ಉದಾರ ಸಹಾಯ ಮಾಡಿದ ಭಾರತ ಹಾಗೂ ಭಾರತೀಯರಿಗೆ ಧನ್ಯವಾದಗಳು, ಮಾಲೀವ್ಸ್ ಗೆ ಭಾರತೀಯ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಬರಬೇಕು ಎಂದು ಕೋರಿದ್ದಾರೆ
ಇದೇ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಮುಯಿಜು ಬಗ್ಗೆ ಹೊಂದಿದ್ದ ಕಠೋರ ನಿಲುವು ಬದಲಿಸಿ ಅಧ್ಯಕ್ಷ ಮುಯಿಜು ಅವರ ಭಾರತ ಭೇಟಿಯು ನಮ್ಮ ಬಾಂಧವ್ಯಕ್ಕೆ ಮತ್ತೊಂದು ಅಧ್ಯಾಯ ತೆರೆದಿದೆ’ ಎಂದಿದ್ದಾರೆ