106
ರಾಯ್ಪುರ : ಆ.15ರ ಸ್ವಾತಂತ್ರ್ಯ ದಿನದಂದು ರಾಜ್ಯದ ಎಲ್ಲಾ ಮಸೀದಿ, ದರ್ಗಾ,ಮದರಸಾಗಳಲ್ಲಿ ತ್ರಿವರ್ಣ ಧ್ವಜವನ್ನು ಕಡ್ಡಾಯವಾಗಿ ಹಾರಿಸಬೇಕು ಎಂದು ಛತ್ತೀಸ್‌ಗಢದ ವಕ್ಸ್ ಮಂಡಳಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ತ್ರಿವರ್ಣಧ್ವಜವು ಗೌರವ ಮತ್ತು ಹೆಮ್ಮೆಯ ಸಂಕೇತವಾಗಿ. ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿಲ್ಲ. 78ನೇ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಛತ್ತೀಸ್‌ಗಢದ ಎಲ್ಲಾ ಮಸೀದಿ, ಮದರಸಾ, ದರ್ಗಾಗಳ ಮುಖ್ಯ ದ್ವಾರಗಳಲ್ಲಿ ಹಾರಿಸಬೇಕು. ಸ್ವಾತಂತ್ರ್ಯ ದಿನದ ಮಹತ್ವವನ್ನು ಅರ್ಥಮಾಡಿ ಕೊಳ್ಳಿ, ದೇಶಭಕ್ತಿ, ಏಕತೆ ಮತ್ತು ಸಹೋದರತ್ವ ಬೆಳೆಸುವ ಮೂಲಕ ಅದರ ಘನತೆ ಕಾಪಾಡಿಕೊಳ್ಳಿ ಎಂದು ತಿಳಿಸಿದೆ.

