Home » ಐಟಿ ರಿಟರ್ನ್ಸ್ ಇನ್ನು ಫೈಲ್ ಮಾಡಬಹುದು
 

ಐಟಿ ರಿಟರ್ನ್ಸ್ ಇನ್ನು ಫೈಲ್ ಮಾಡಬಹುದು

ಐಟಿಆ‌ರ್1 ಮತ್ತು ಐಟಿಆರ್-4 ಫಾರ್ಮ್‌ಗಳು ಬಿಡುಗಡೆ

by Kundapur Xpress
Spread the love

ನವದೆಹಲಿ : ‘2025-26ನೇ ಸಾಲಿನ ಐಟಿಆರ್ -1 ಮತ್ತು ಐಟಿಆ‌ರ್-4ನ್ನು ಫಾರ್ಮ್ಗಳನ್ನು ಸಕ್ರಿಯಗೊಳಿಸಲಾಗಿದೆ. ಈ ಮೂಲಕ ತೆರಿಗೆದಾರರು 2024-25ರಲ್ಲಿ ಗಳಿಸಿದ ಆದಾಯದ ಐಟಿ ರಿಟರ್ನ್ಸ್‌ ಸಲ್ಲಿಸಲು ಪ್ರಾರಂಭಿಸಬಹುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಇದರನ್ವಯ 2025-26ನೇ ಸಾಲಿನ ಐಟಿಆರ್ -1 ಮತ್ತು ಐಟಿಆರ್-4ಕ್ಕಾಗಿ ಎಕ್ಸೆಲ್ ಫಾರ್ಮ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ತಮ್ಮ ಖಾತೆಗಳ ಲೆಕ್ಕಪರಿಶೋಧನೆ ಮಾಡಿಸಿಕೊಳ್ಳುವ ಅಗತ್ಯವಿಲ್ಲದ, ವಾರ್ಷಿಕ 50 ಲಕ್ಷ ರು. ವರೆಗೆ ಆದಾಯ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಇದು ಅನ್ವಯವಾಗುತ್ತದೆ.

ಐಟಿಆ‌ರ್-1 ಮತ್ತು ಐಟಿಆರ್-4ರಲ್ಲಿ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕವನ್ನು ಜು.31ರಿಂದ ಸೆ.15ಕ್ಕೆ ವಿಸ್ತರಿಸಲಾಗಿದೆ.

 

Related Articles

error: Content is protected !!