117
ಪೊಂಚ್ : ಭಾರತ-ಪಾಕಿಸ್ತಾನ ಸಂಘರ್ಷದ ವೇಳೆ ಪಾಕ್ ನಡೆಸಿದ ಶೆಲ್ ದಾಳಿ ಸಂತ್ರಸ್ತರಾದ ಜಮ್ಮು ಮತ್ತು ಕಾಶ್ಮೀರದ ಪೊಂಚ್ ನ ಜನರನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಶುಕ್ರವಾರ ಭೇಟಿಯಾದರು. ಈ ವೇಳೆ ಸಂತ್ರಸ್ತರ ಜತೆ ಮಾತನಾಡಿದ ಅವರು, ‘ಕಾಶ್ಮೀರದ ಅಭಿವೃದ್ಧಿ ಇಂಥ ದಾಳಿಗಳಿಗೆಲ್ಲ ನಿಲ್ಲುವುದಿಲ್ಲ, ನಿಧಾನವಾಗುವುದೂ ಇಲ್ಲ. ಭಾರತಕ್ಕೆ ಹಾನಿ ಮಾಡಲು ಪ್ರಯತ್ನಿಸುವವರು ಯಾರೇ ಆದರೂ ತಕ್ಕ ಉತ್ತರ ನೀಡಲಾಗುವುದು. ಈಗಾಗಲೇ ಭಾರತವು ಪಾಕ್‌ನ 118 ಮುಂಚೂಣಿ ನೆಲೆಗಳನ್ನು ಧ್ವಂಸ ಮಾಡಿದೆ ಎಂದರು

