Home » ಪುರಿ : ರತ್ನ ಭಂಢಾರ ಓಪನ್
 

ಪುರಿ : ರತ್ನ ಭಂಢಾರ ಓಪನ್

by Kundapur Xpress
Spread the love

ಪುರಿ : ಒಡಿಶಾದ ಪುರಿಯಲ್ಲಿರುವ 12ನೇ ಶತಮಾನದ ವಿಶ್ವ ಪ್ರಸಿದ್ದ ಜಗನ್ನಾಥ ದೇಗುಲದ ಅಪಾರ ಚಿನ್ನಾಭರಣಗಳನ್ನು ಸಂಗ್ರಹಿಸಿ ಇಡಲಾಗಿರುವ, ‘ರತ್ನ ಭಂಡಾರ’ ಎಂದು ಕರೆಯಲಾಗುವ ಕೋಣೆಗಳನ್ನು 46 ವರ್ಷಗಳ ಬಳಿಕ ಭಾನುವಾರ ತೆರೆಯಲಾಯಿತು

ರತ್ನ ಭಂಡಾರದ ದುರಸ್ತಿ ಮತ್ತು ಆಭರಣಗಳ ಮೌಲ್ಯಮಾಪನದ ಉದ್ದೇಶದಿಂದ ಈ ಪ್ರಕ್ರಿಯೆ ಆರಂಭಿಸಿದ್ದು, ಭಾನುವಾರ ಮಧ್ಯಾಹ್ನ 12.00 ಗಂಟೆ ವೇಳೆಗೆ ಅಧಿಕಾರಿ ಗಳು, ದೇಗುಲದ ಮುಖ್ಯಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಸಿ ಮಧ್ಯಾಹ್ನ 1.28ಕ್ಕೆ ಭೀತರ್‌ಭಂಡಾರ (ಒಳ ಕೋಣೆ), ಬಾಹರ್ ಭಂಡಾರ್ (ಹೊರ ಕೋಣೆ) ಎರಡನ್ನೂ ತೆರೆಯಲಾಯಿತು.

   

Related Articles

error: Content is protected !!