Home » ಅಕ್ರಮ ವಲಸಿಗರ ಗಡೀಪಾರಿಗೆ ಭಾರತದ ತಕರಾರಿಲ್ಲ
 

ಅಕ್ರಮ ವಲಸಿಗರ ಗಡೀಪಾರಿಗೆ ಭಾರತದ ತಕರಾರಿಲ್ಲ

ಜೈಶಂಕ‌ರ್

by Kundapur Xpress
Spread the love

ವಾಷಿಂಗ್ಟನ್ : ‘ವಿದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ನ್ಯಾಯಸಮ್ಮತವಾಗಿ ಗಡೀಪಾರು ಮಾಡುವ ಬಗ್ಗೆ ನಮಗೆ ತಕರಾರಿಲ್ಲ ಅವರನ್ನು ದೇಶಕ್ಕೆ ಬರಮಾಡಿಕೊಳ್ಳಲು ಭಾರತ ಸದಾ ಸಿದ್ದವಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಹಾಕುವ ಭಾಗವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಸುಮಾರು 1.8 ಲಕ್ಷ ದಾಖಲೆ ರಹಿತ ಅಥವಾ ವೀಸಾ ಅವಧಿ ಮೀರಿ ವಾಸವಿರುವ ಭಾರತೀಯರನ್ನು ಗಡೀಪಾರು ಮಾಡಲಿದೆ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಾರತದ ಪ್ರತಿಭೆಗಳಿಗೆ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಅವಕಾಶಗಳು ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ ನ್ಯಾಯಯುತ ವಲಸೆಯನ್ನು ಬೆಂಬಲಿಸುತ್ತದೆ. ಆದರೆ, ಅಕ್ರಮ ವಲಸೆಯನ್ನು ಬಲವಾಗಿ ಖಂಡಿಸುತ್ತೇವೆ. ಕಾರಣ ವಿದೇಶಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು ನಮ್ಮ ಪ್ರತಿಷ್ಠೆಗೆ ಧಕ್ಕೆ ತರುತ್ತವೆ. ಆದ್ದರಿಂದ ಅಂಥವರು ಅಮೆರಿಕ ಸೇರಿದಂತೆ ಯಾವ ದೇಶದಲ್ಲಿದ್ದರೂ ಮರಳಿ ಭಾರತಕ್ಕೆ ಕರೆದುಕೊಳ್ಳಲು ಸಿದ್ಧ ಎಂದರು.

 

Related Articles

error: Content is protected !!