Home » 9 ವರ್ಷಗಳ ಬಳಿಕ ಪಾಕಿಸ್ಥಾನಕ್ಕೆ ಭೇಟಿ
 

9 ವರ್ಷಗಳ ಬಳಿಕ ಪಾಕಿಸ್ಥಾನಕ್ಕೆ ಭೇಟಿ

by Kundapur Xpress
Spread the love

ನವದೆಹಲಿ :  ಪಾಕಿಸ್ತಾನದಲ್ಲಿ ನಡೆಯುತ್ತಿರುವ ಶಾಂಫ್ಟ್ ಸಹಕಾರ ಶೃಂಗ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಂಗಳವಾರ ಸಂಜೆ ಪಾಕ್ ರಾಜಧಾನಿ ಇಸ್ಲಾಮಾಬಾದ್‌ಗೆ ಬಂದಿಳಿದರು.

ಈ ವೇಳೆ ಅವರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು ಇದು ಭಾರತದ ಸಚಿವರೊಬ್ಬರು 9 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ನೀಡಿದ ಭೇಟಿ ಎಂಬುದು ವಿಶೇಷ ಬಳಿಕ ರಾತ್ರಿ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್‌ ಆಯೋಜಿಸಿದ್ದ ಔತಣಕೂಟದಲ್ಲಿ ಜೈಶಂಕರ್ ಭಾಗಿಯಾದರು. ಈ ವೇಳೆ ಶರೀಫ್‌ ಮತ್ತು ಜೈಶಂಕರ್‌ ಪರಸ್ಪರ ಆತ್ಮೀಯವಾಗಿಕೈ ಕುಲುಕಿದ್ದು ಸಂಕ್ಷಿಪ್ತ ಮಾತುಕತೆ ನಡೆಸಿದರು.

ಅ.15 ಹಾಗೂ 16ರಂದು ನಡೆಯಲಿರುವ ಶೃಂಗದಲ್ಲಿ ಜೈಶಂಕರ್ ಭಾರತವನ್ನು ಪ್ರತಿನಿಧಿಸಿದ್ದರೂ, ಪಾಕಿಸ್ತಾನದ ಜೊತೆಗೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿಲ್ಲ. ಈ ವಿಷಯವನ್ನು ಈಗಾಗಲೇ ಭಾರತ ಸರ್ಕಾರ ಸ್ಪಷ್ಟಪಡಿಸಿದೆ. 

   

Related Articles

error: Content is protected !!