173
ತಿರುವನಂತಪುರಂ : ಕೇರಳದ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇಗುಲದಲ್ಲಿ 270 ವರ್ಷಗಳ ಬಳಿಕ ಅದ್ಧೂರಿಯಾಗಿ ಭಾನುವಾರ ಮಹಾ ಕುಂಭಾಭಿಷೇಕ ನಡೆದಿದ್ದು 2 ಶತಮಾನದ ಬಳಿಕ ನಡೆದ ಅಷ್ಟಬಂಧ ಕಲಶ ಧಾರ್ಮಿಕ ಆಚರಣೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು.
ಸಾಮಾನ್ಯ ವಾಗಿ 12 ವರ್ಷಕ್ಕೊಮ್ಮೆ ಕುಂಭಾಭಿಷೇಕ ಮತ್ತು 100 ವರ್ಷಕ್ಕೊಮ್ಮೆ ಅಷ್ಟಬಂಧ ನಡೆಸಲಾಗುತ್ತದೆ. ಆದರೆ ಇತ್ತೀಚಿನ ಪರಿಶೀಲನೆ ವೇಳೆ ದೇಗುಲದ ಹಲವು ಮೂರ್ತಿಗಳು ಭಗ್ನಗೊಂಡಿದ್ದು ಕಂಡುಬಂದಿತ್ತು. ಹೀಗಾಗಿ ಹೊಸದಾಗಿ ಅಷ್ಟಬಂಧ ನಡೆಸಿ, ಕುಂಭಾಬಿಷೇಕ ನಡೆಸಲು ಉದ್ದೇಶಿಸಲಾಗಿತ್ತು. ಇಂಥ ಪ್ರಕ್ರಿಯೆ ಈ ಹಿಂದೆ 270 ವರ್ಷಗಳ ಹಿಂದೆ ನಡೆದಿತ್ತು. ಇದೀಗ ಹಲವು ಹೊಸ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿ ಬಳಿಕ ಕುಂಭಾಭಿಷೇಕ ನಡೆಸಲಾಗಿದೆ.

