110
ಭೋಪಾಲ್ : ಬಾಂಗ್ಲಾದೇಶದ ವ್ಯಕ್ತಿಯೊಬ್ಬ 28 ವರ್ಷಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಬಂದು, ತೃತೀಯ ಲಿಂಗಿಯ ಸೋಗಿನಲ್ಲಿ ವಾಸಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆತನನ್ನು ಭೋಪಾಲ್ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ವಲಸಿಗರ ಪತ್ತೆ ಭರದಿಂದ ನಡೆಯುತ್ತಿದ್ದ ವೇಳೆ, ಅಬ್ದುಲ್ ಕಲಾಂ ಎಂಬ ವ್ಯಕ್ತಿ ‘ನೇಹಾ’ ಎಂಬ ತೃತೀಯ ಲಿಂಗಿಯ ವೇಷದಲ್ಲಿ ಇದ್ದದ್ದಷ್ಟೇ ಅಲ್ಲದೆ, ಆಧಾರ್ ಕಾರ್ಡ್, ಮತಚೀಟಿ, ಪಾಸ್‌ಪೋರ್ಟ್ ಕೂಡ ಹೊಂದಿದ್ದು ಪತ್ತೆಯಾಗಿದೆ.
ನೇಹಾ ನಿಜವಾಗಿಯೂ ತೃತೀಯ ಲಿಂಗಿಯೇ ಅಥವಾ ಅದು ಗುರುತು ಮರೆಮಾಚುವ ಯತ್ನವಾಗಿತ್ತೇ ಎಂಬುದರ ಪರಿಶೀಲನೆಗೆ ಅಬ್ದುಲ್‌ನ ಲಿಂಗಪತ್ತೆ ಪರೀಕ್ಷೆಗೆ ನಿರ್ಧರಿಸಲಾಗಿದೆ.
ಬಾಂಗ್ಲಾದಿಂದ ಭಾರತಕ್ಕೆ 10 ವರ್ಷದವನಿದ್ದಾಗ ಭಾರತಕ್ಕೆ ಬಂದಿದ್ದ ಅಬ್ದುಲ್ 20 ವರ್ಷ ಮುಂಬೈನಲ್ಲಿ ನೆಲೆಸಿ, ಬಳಿಕ ಭೋಪಾಲ್‌ಗೆ ಬಂದು, ನೇಹಾ ರೂಪ ತಳೆದಿದ್ದ.

