Home » ಮೊತ್ತ ಮೊದಲ ಖೋಖೋ ವಿಶ್ವಕಪ್‌ ಗೆದ್ದ ಭಾರತ
 

ಮೊತ್ತ ಮೊದಲ ಖೋಖೋ ವಿಶ್ವಕಪ್‌ ಗೆದ್ದ ಭಾರತ

by Kundapur Xpress
Spread the love

ಹೊಸದಿಲ್ಲಿ : ಪಂದ್ಯಾವಳಿ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ಹಾಗೂ ಪುರುಷ ತಂಡಗಳು ಇಲ್ಲಿ ಮುಕ್ತಾಯಗೊಂಡ ವಿಶ್ವದ ಮೊಟ್ಟಮೊದಲ ಖೋಖೋ ವಿಶ್ವಕಪ್ ಗೆದ್ದುಕೊಂಡಿತು ಇಲ್ಲಿನ ಇಂದಿರಾಗಾಂಧಿ ಒಳ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಹಿಳಾ ತಂಡವು

ನೇಪಾಳ ವಿರುದ್ಧ 78-40 ರ ವಿಜಯ ದಾಖಲಿಸಿದರೆ, ಪುರುಷರು ನೇಪಾಳ ವಿರುದ್ಧವೇ 54-36ರ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ವಿಶ್ವದ ಮೊಟ್ಟ ಮೊದಲ ಚಾಂಪಿಯನ್ ಪಟ್ಟ ಕಟ್ಟಿಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಮೊದಲ ಕ್ವಾರ್ಟ‌್ರನಿಂದಲೂ ಹಿಡಿತ ಸಾಧಿಸಿದ ಭಾರತ ನೇಪಾಳಕ್ಕೆ ಅವಕಾಶವೇ ನೀಡಲಿಲ್ಲ. ಇನ್ನು ಪುರುಷರ ರೋಚಕ ಪಂದ್ಯದಲ್ಲಿ ಡಿಫೆನ್ಸ್ ವಿಭಾಗ ಪ್ರಮುಖ ಪಾತ್ರ ವಹಿಸಿತು.

 

Related Articles

error: Content is protected !!