Home » ಆರು ಕೀರ್ತಿ ಚಕ್ರ , 33 ಶೌರ್ಯ ಚಕ್ರ ಪ್ರದಾನ
 

ಆರು ಕೀರ್ತಿ ಚಕ್ರ , 33 ಶೌರ್ಯ ಚಕ್ರ ಪ್ರದಾನ

by Kundapur Xpress
Spread the love

ಹೊಸದಿಲ್ಲಿ: ಕರ್ತವ್ಯದಲ್ಲಿ ಅದಮ್ಯ ಧೈರ್ಯ ಮತ್ತು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದ ಸೇನೆ ಮತ್ತು ಜಮ್ಮು -ಕಾಶ್ಮೀರ ಪೊಲೀಸ್ ಸಿಬ್ಬಂದಿಗೆ 7 ಮರಣೋತ್ತರ ಸೇರಿದಂತೆ 6ಕೀರ್ತಿ ಚಕ್ರಗಳನ್ನು ರಾಷ್ಟ್ರಪತಿ ಬ್ರೌಪದಿ ಮುರ್ಮು ಪ್ರದಾನ ಮಾಡಿದರು

ಸರ್ಕಾರ ಹಂಚಿಕೊಂಡಿರುವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ಪ್ರಕಾರ, ಸಿಖ್ ಲೈಟ್ ಇನ್‌ಫೆಂಟ್ರಿಯ ಕರ್ನಲ್ ಮತ್ ಸಿಂಗ್, ರಾಷ್ಟ್ರೀಯ ರೈಫಲ್ಸ್ನ ಇತರ ಇಬ್ಬರು ಸೇನಾ ಸಿಬ್ಬಂದಿ ಮತ್ತು ಜಮ್ಮು -ಕಾಶ್ಮೀರ ಪೊಲೀಸ್ ಅಧಿಕಾರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ರಕ್ಷಣಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿ ಮುರ್ಮು ಅವರು, ಏಳು ಮರಣೋತ್ತರ ಸೇರಿದಂತೆ 33 ಶೌರ್ಯ ಚಕ್ರಗಳನ್ನು ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಪೊಲೀಸರ ಸಿಬ್ಬಂದಿಗೆ ಪ್ರದಾನ ಮಾಡಿದರು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮರಾಠಾ ಲೈಟ್ ಇನ್‌ಫೆಂಟ್ರಿಯ 56 ರಾಷ್ಟ್ರೀಯ ರೈಫಲ್ಸ್ನ ಮೇಜರ್ ಮಲ್ಲ ರಾಮ ಗೋಪಾಲ್ ನಾಯ್ಡು ಮತ್ತು ಪಂಜಾಬ್ ರೆಜಿಮೆಂಟ್‌ನ 22 ರಾಷ್ಟ್ರೀಯ ರೈಫಲ್ಸ್ನ ಮೇಜರ್ ಮಂಜಿತ್ ಅವರಿಗೆ ಕೀರ್ತಿ ಚಕ್ರ ನೀಡಲಾಯಿತು.

 

Related Articles

error: Content is protected !!