115
ಅಹಮದಾಬಾದ್: ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ವ್ಯಕ್ತಿಯೊಬ್ಬರು ಪವಾಡ ಸದೃಶವಾಗಿ ಬದುಕುಳಿದಿದ್ದಾರೆ.
ಭಾರತ ಮೂಲದ ಬ್ರಿಟನ್ ಪ್ರಜೆ ವಿಶ್ವನಾಥ ಕುಮಾರ್ ರಮೇಶ್ (40 years) ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ. ನತದೃಷ್ಟ ವಿಮಾನದಲ್ಲಿ ಇವರು 11ಎ ಸೀಟಿನಲ್ಲಿ ಕುಳಿತಿದ್ದರು. ಅವರ ಎದೆ, ಕಣ್ಣು, ಪಾದಗಳಿಗೆ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶ್ವನಾಥ ಕಳೆದ 20 ವರ್ಷಗಳಿಂದ ಲಂಡನ್‌ನಲ್ಲಿ ವಾಸವಿದ್ದರು.ಅವರ ಪತ್ನಿ ಹಾಗೂ ಮಗು ಕೂಡ ಲಂಡನ್‌ನಲ್ಲೇ ಇದ್ದಾರೆ.

