Home » ಎಲ್‌ ಪಿ ಜಿಗೂ ಆಧಾರ್‌ ಲಿಂಕ್
 

ಎಲ್‌ ಪಿ ಜಿಗೂ ಆಧಾರ್‌ ಲಿಂಕ್

ನಕಲಿ ಬಳಕೆದಾರರ ಪತ್ತೆಗೆ ಕ್ರಮ

by Kundapur Xpress
Spread the love

ನವದೆಹಲಿ: ನಕಲಿ ಬಳಕೆದಾರರನ್ನು ಪತ್ತೆ ಹಚ್ಚಲು ಸರ್ಕಾರಿ ಸ್ವಾಮ್ಯದಲ್ಲಿರುವ ತೈಲ ಕಂಪನಿಗಳು ಎಲ್‌ಪಿಜಿಗೂ ಗ್ರಾಹಕರ ಆಧಾರ್ ಜೋಡಣೆಗೆ ಸರ್ಕಾರ ಮುಂದಾಗಿದೆ. ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ತಮ್ಮ ಟ್ವಿಟರ್ ಖಾತೆಯಲ್ಲಿ ‘ವಾಣಿಜ್ಯ ಸಿಲಿಂಡರ್‌ ಬಳಕೆದಾರರು ಪ್ರಮುಖವಾಗಿ ಅಡುಗೆ ಅನಿಲವನ್ನು ಬುಕ್ ಮಾಡುತ್ತಿದ್ದಾರೆ. ಆದ್ದರಿಂದ ಕಾನೂನು ಬದ್ದವಾಗಿ ನೋಂದಾಯಿಸಿಕೊಂಡ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಎಲ್‌ಪಿಜಿ ಗ್ರಾಹಕರಿಗೆ ಆಧಾರ್‌ ಆಧಾರಿತ ಇ-ಕೆವೈಸಿ ದೃಢೀಕರಣ ನಡೆಸಲಾಗುತ್ತದೆ.ಇದರಿಂದ ನಕಲಿ ಬಳಕೆದಾರರನ್ನು ಪತ್ತೆ ಹಚ್ಚಿಅವರನ್ನು ತೆಗೆದು ಹಾಕಲು ಸಹಾಯ ವಾಗಲಿದೆ. ಈ ಆಧಾರ್ ಜೋಡಣೆ ಪ್ರಕ್ರಿಯೆ 8 ತಿಂಗಳಿಗಿಂದ ಹೆಚ್ಚು ಕಾಲ ಜಾರಿಯಲ್ಲಿರಲಿದೆ’ ಎಂದು ಟ್ವಿಟ್ ಮಾಡಿದ್ದಾರೆ.

   

Related Articles

error: Content is protected !!