Home » ಮೋದಿ ಇಳಿಸುವವರೆಗೂ ನಾನು ಸಾಯೋದಿಲ್ಲ
 

ಮೋದಿ ಇಳಿಸುವವರೆಗೂ ನಾನು ಸಾಯೋದಿಲ್ಲ

 ಹೃದಯ ವೈಶಾಲ್ಯತೆ ಮೆರೆದ ಮೋದಿ

by Kundapur Xpress
Spread the love

ಜಮ್ಮು-ಕಾಶ್ಮೀರ : ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವವರೆಗೂ ನಾನು ಸಾಯುವುದಿಲ್ಲ. ಅಲ್ಲಿಯವರೆಗೂ ನಾನು ಬದುಕಿರುತ್ತೇನೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿ ದ್ದಾರೆ. ಭಾನುವಾರ  ಚುನಾವಣಾ ರ್ಯಾಲಿ ವೇಳೆ ಖರ್ಗೆ ರಕ್ತದೊತ್ತಡ ಕಡಿಮೆ ಆಗಿ ವೇದಿಕೆ  ಮೇಲೇ ದಿಢೀರ್ ಅಸ್ವಸ್ಥರಾದರು. ಆದರೂ ಸಾವರಿಸಿಕೊಂಡು ನಿಂತೇ ಮಾತನಾಡಿ ಮೋದಿಗೆ ಈ ಮೇಲಿನಂತೆ ಸವಾಲು ಹಾಕಿದ್ದಾರೆ

ರ್ಯಾಲಿಯಲ್ಲಿ ಮಾತನಾಡುವಾಗ ಖರ್ಗೆ ಅವರಿಗೆ ತಲೆ ಸುತ್ತಿದ ಅನುಭವವಾಯಿತು ಹಾಗೂ ಏಕಾಏಕಿ ಉಸಿರಾಟದಲ್ಲಿ ಏರಿಳಿತ ಆದಂತೆ ಕಂಡುಬಂತು. ಕೂಡಲೇ ಅಕ್ಕಪಕ್ಕದಲ್ಲಿದ್ದ ಕಾಂಗ್ರೆಸ್‌ಕಾರ್ಯಕರ್ತರು 82 ವರ್ಷದ ನಾಯಕನ ಸಹಾಯಕ್ಕೆ ಧಾವಿಸಿದರು. ಒಂದು ಗುಟುಕು ನೀರು ಕುಡಿದ ನಂತರ,ಖರ್ಗೆ ಅವರು ಕೆಲಹೊತ್ತು ಅಲ್ಲೇ ವಿಶ್ರಮಿಸಿದರು. ನಂತರ ಕಾರ್ಯಕರ್ತರ ಸಹಾಯದಿಂದ ತಮ್ಮ ಭಾಷಣಕ್ಕೆ ಮರಳಿ, ‘ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ನಾವು ಹೋರಾಡುತ್ತೇವೆ. ಈಗ ನನಗೆ ಈಗ 83 ವರ್ಷ. ನಾನು ಇಷ್ಟು ಬೇಗ ಸಾಯುವುದಿಲ್ಲ. ಮೋದಿಯನ್ನು ಅಧಿಕಾರದಿಂದ ತೆಗೆದು ಹಾಕುವವರೆಗೂ ನಾನು ಸಾಯುವುದಿಲ್ಲಅಲ್ಲಿಯವರೆಗೂ ನಾನು ಬದುಕಿರುತ್ತೇನೆ ಎಂದರು

 ಹೃದಯ ವೈಶಾಲ್ಯತೆ ಮೆರೆದ ಮೋದಿ

ಭಾಷಣ ಮಾಡುವಾಗ ಅಸ್ವಸ್ಥರಾ ಗಿದ್ದ ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ಫೋನ್ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಮೋದಿಯನ್ನು ಇಳಿಸೋವರೆಗೂ ನಾನು ಸಾಯಲ್ಲ ಎಂದು ಅವರು ಹೇಳಿದ್ದರೂ, ಅದರ ಬೆನ್ನಲ್ಲೇ ಮೋದಿ ಕರೆ ಮಾಡಿ ‘ಬೇಗ ಗುಣ ಮುಖರಾಗಿ’ ಎಂದು ಹಾರೈಸಿರು ವುದು ಮೆಚ್ಚುಗೆಗೆ ಪಾತ್ರವಾಗಿದೆ.

   

Related Articles

error: Content is protected !!