Home » ಪ್ರಸಿದ್ದ ಮಿಗ್-21ವಿಮಾನ ಯುಗಾಂತ್ಯ
 

ಪ್ರಸಿದ್ದ ಮಿಗ್-21ವಿಮಾನ ಯುಗಾಂತ್ಯ

by Kundapur Xpress
Spread the love

ಹೊಸದಿಲ್ಲಿ : ಭಾರತೀಯ ವಾಯುಪಡೆ ಬಲವರ್ಧನೆ ಉದ್ದೇಶದಿಂದ ಪ್ರಸಿದ್ಧ ಮಿಗ್-21 ಯುದ್ಧ ವಿಮಾನಗಳನ್ನು ಸೆಪ್ಟೆಂಬರ್ ನಿಂದ ಸೇವೆಯಿಂದ ತೆಗೆದುಹಾಕಲು ಐಎಎಫ್ ನಿರ್ಧರಿಸಿದೆ. ಮಿಗ್ -21 ಬದಲಿಗೆ ತೇಜಸ್ ಎಂಕೆಎ ಆಧುನಿಕ ಯುದ್ಧ ವಿಮಾನಗಳನ್ನು ಬಳಕೆಗೆ ತರಲು ಸೇನೆ ನಿರ್ಧರಿಸಿದೆ. ಇದರೊಂದಿಗೆ ಇಷ್ಟು ವರ್ಷಗಳ ಕಾಲ ಸೇನೆಗೆ ಬಲ ತುಂಬಿದ್ದ ಮಿಗ್-21 ಯುಗಾಂತ್ಯ ಆಗಲಿದೆ.

ಐಎಎಫ್ ಬಳಿ 36 ಮಿಗ್-21 ಯುದ್ಧ ವಿಮಾನಗಳಿದ್ದು, ಇದರಲ್ಲಿ ಕೊನೆಯ ಆವೃತ್ತಿ ಬೈಸನ್ ಯುದ್ಧ ವಿಮಾನಗಳಿಗೆ ಬಳಕೆಯಿಂದ ನಿವೃತ್ತಿ ನೀಡಲಾಗುತ್ತಿದೆ. 2023ರಲ್ಲಿ ಮಿಗ್-21 ಯುದ್ಧ ವಿಮಾನಗಳ ಬಳಕೆ ನಿಲ್ಲಿಸುವುದಾಗಿ ಐಎಎಫ್ ಘೋಷಿಸಿತ್ತು. 2025ರೊಳಗೆ ಮಿಗ್-21 ಯುದ್ಧ ವಿಮಾನಗಳ ಹಾರಾಟವನ್ನು ನಿಲ್ಲಿಸುತ್ತೇವೆ ಮತ್ತು ಬದಲಿಗೆ ತೇಜಸ್ ಎಲ್‌ಸಿಎ ಮಾರ್ಕ್-1ಎ ಬಳಸುತ್ತೇವೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ 2023ರಲ್ಲಿ ಹೇಳಿದ್ದರು.

ಸುಮಾರು 900 ಮಿಗ್-21 ಯುದ್ಧ ವಿಮಾನಗಳಲ್ಲಿ 660 ಅನ್ನು ಭಾರತದಲ್ಲಿ ನಿರ್ಮಿಸಲಾಗಿದ್ದವು. ಇವುಗಳಲ್ಲಿ ಐಎಎಫ್ ಬಳಿ 36 ಉಳಿದಿವೆ. 1963ರಲ್ಲಿ ಮಿಗ್-21 ಸೇನೆಗೆ ಸೇರ್ಪಡೆಯಾಗಿದ್ದವು. ರಷ್ಯಾ ನಿರ್ಮಾಣ ತಂತ್ರಜ್ಞಾನದ ಮಿಗ್-21 ಐಎಎಫ್ ಬೆನ್ನೆಲುಬಾಗಿ ಸೇವೆ ಸಲ್ಲಿಸಿದೆ

 

Related Articles

error: Content is protected !!