Home » ಮೋದಿ : ಸಮತೋಲಿತ ಸಚಿವ ಸಂಪುಟ
 

ಮೋದಿ : ಸಮತೋಲಿತ ಸಚಿವ ಸಂಪುಟ

by Kundapur Xpress
Spread the love

ನವದೆಹಲಿ : ಭಾನುವಾರ ರಚನೆ ಆದ ತಮ್ಮ 3ನೇ ಸರ್ಕಾರದ 72 ಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಖಾತೆ ಹಂಚಿಕೆ ಮಾಡಿದ್ದಾರೆ. ವಿಶೇಷವೆಂದರೆ ತಮ್ಮ 2ನೇ ಸರ್ಕಾರದ ನಿರಂತರತೆ ಈಗಲೂ ಮುಂದುವರಿಯಬೇಕು ಎಂಬ ಉದ್ದೇಶ ದಿಂದ ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳಂಥ 4 ಉನ್ನತ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡದೇ, ಅದೇ ಸಚಿವರನ್ನು ಮುಂದುವರಿಸಿದ್ದಾರೆ.ಇದರಿಂದ ಅಮಿತ್ ಶಾ ಅವರು ಗೃಹ ಮತ್ತು ಸಹಕಾರ, ರಾಜನಾಥ್ ಸಿಂಗ್ ಅವರು ರಕ್ಷಣೆ, ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಮತ್ತು ಎಸ್. ಜೈಶಂಕ‌ರ್ ಅವರು ವಿದೇಶಾಂಗ ಖಾತೆಯಲ್ಲೇ ಮುಂದುವರಿದಿದ್ದಾರೆ. ಈ ಖಾತೆಗಳ ಉಸ್ತುವಾರಿ ಹೊಂದಿರುವ ನಾಲ್ವರು ಮಂತ್ರಿಗಳು ಪ್ರಧಾನ ಮಂತ್ರಿ ನೇತೃತ್ವದ ಭದ್ರತೆಯ ಪ್ರಮುಖ ಕ್ಯಾಬಿನೆಟ್ ಸಮಿತಿಯ ಸದಸ್ಯರಾಗಿರುತ್ತಾರೆ.

ಇದೇ ವೇಳೆ, ಸಂಪುಟಕ್ಕೆ ಹೊಸದಾಗಿ ಸೇರ್ಪಡೆ ಗೊಂಡವರಲ್ಲಿ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಪಡೆಡದಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಹೊಂದಿದ್ದ ಆರೋಗ್ಯ ಖಾತೆ ಪಡೆಯಲು ಯಶಸ್ವಿಯಾಗಿದ್ದಾರೆ.

ದೇಶದಾದ್ಯಂತ ಹೆದ್ದಾರಿ ಜಾಲವನ್ನು ಹೆಚ್ಚಿಸಿದ ಕೀರ್ತಿಗೆ ಪಾತ್ರರಾದ ನಿತಿನ್ ಗಡ್ಕರಿ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಉಸ್ತುವಾರಿ ಉಳಿಸಿಕೊಂಡಿದ್ದಾರೆ. ಪ್ರಮುಖ ಖಾತೆಯಾದ ರೈಲ್ವೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಈ ಹಿಂದಿನಂತೆಯೇ ಅಶ್ವಿನಿ ವೈಷ್ಣವ್ ಪಾಲಾಗಿದೆ. ಜತೆಗೆ ಅವರಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನೂ ಸಹ ನೀಡಲಾಗಿದೆ

   

Related Articles

error: Content is protected !!