ನವದೆಹಲಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಸೆ.21ರಿಂದ 23ರವರೆಗೆ 3 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಸೆ.21ರಂದು ಡೆಲ್ವಾರೆಯ ವಿಲ್ಡಿಂಗ್ ಟನ್‌ನಲ್ಲಿ ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ವಾರ್ಷಿಕ ಕ್ವಾಡ್ ಸಮ್ಮೇಳನ ನಡೆಯಲಿದ್ದು ಅದರಲ್ಲಿ ಭಾರತದ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಸೆ.22ರಂದು ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಲಿದ್ದು, ಜಾಗತಿಕ ಕಂಪನಿಗಳ ಸಿಇಒಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಸೆ.23ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಸಮ್ಮಿಟ್ ಆಫ್ ಪ್ಯೂಚರ್’ ಸಮ್ಮೇಳನ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಭೇಟಿಯ ವೇಳೆ ಮೋದಿ ಅವರನ್ನು ಭೇಟಿಯಾಗುವ ಭರವಸೆಯನ್ನು, ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿರುವವರಾದರೂ ಖಚಿತವಾಗಿಲ್ಲ