ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಜನರ, ವಿಶೇಷವಾಗಿ ದಲಿತರು, ಯುವಕರು ಮತ್ತು ಮಹಿಳೆಯರ ಜೀವನವನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಎನ್‌ಡಿಎ ಮೂರನೇ ಅವಧಿಯ ಮೊದಲ 100 ದಿನಗಳ ಅಧಿಕಾರಾವಧಿಯ ಪ್ರಮುಖ ಸಾಧನೆಗಳ ಬಗ್ಗೆ ಮಾತನಾಡಿರುವ ಅವರು, ಪ್ರಧಾನಿ ತಮ್ಮ ಜೀವನವನ್ನು ದೇಶ ಮತ್ತು ಮಾನವೀಯತೆಯ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ.ಅವರು ಜನರ ಜೀವನವನ್ನು ಬದಲಾಯಿಸುತ್ತಿದ್ದಾರೆ ಮತ್ತು ಅವರ ಸಂಕಲ್ಪವನ್ನು ಸಾಧನೆಯಾಗಿ ಪರಿವರ್ತಿಸಿದ್ದಾರೆ ಎಂದರು. ಇದೇ ವೇಳೆ ನಡ್ಡಾ ಅವರು ಸೇವಾ ಪಕ್ವಾಡಾದಲ್ಲಿ ರಕ್ತದಾನ ಶಿಬಿರ ಮತ್ತು ಪ್ರಧಾನಿಯವರ ಜೀವನದ ಪ್ರದರ್ಶನವನ್ನು ಉದ್ಘಾಟಿಸಿದರು. ನಾವು ಅಂತಹ ಮಹಾನ್ ವ್ಯಕ್ತಿಯ ಜನ್ಮದಿನವನ್ನು ಸೇವಾ ದಿವಸ್ ಎಂದು ಆಚರಿಸುತ್ತೇವೆ ಎಂದರು. ಹಿರಿಯ ನಾಗರಿಕರನ್ನು ಒಳಗೊಳ್ಳಲು ಆಯುಷ್ಮಾನ್ ಭಾರತ್ ಯೋಜನೆ. ಏಕೀಕೃತ ಪಿಂಚಣಿ ಯೋಜನೆ ಮತ್ತು 12 ಹೊಸ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಕೇಂದ್ರದ ಅನುಮೋದನೆ ನೀಡಲಾಗಿರುವ ಮೋದಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.