Home » 7 ವರ್ಷ ಬಳಿಕ ಭಾರತ ಪ್ರಧಾನಿ ಚೀನಾ ಭೇಟಿ
 

7 ವರ್ಷ ಬಳಿಕ ಭಾರತ ಪ್ರಧಾನಿ ಚೀನಾ ಭೇಟಿ

by Kundapur Xpress
Spread the love

ಟಿಯಾಂಜಿನ್ : ಸುದೀರ್ಘ ಏಳು ವರ್ಷಗಳ ಬಳಿಕ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಂಪು ಹಾಸಿನ ಸ್ವಾಗತದೊಂದಿಗೆ ಚೀನಾ ಸರ್ಕಾರ ಅದ್ಧೂರಿಯಾಗಿ ಬರಮಾಡಿಕೊಂಡಿದೆ. ಟಿಯಾಂಜಿನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಚೀನಾ ಹಿರಿಯ ಅಧಿಕಾರಿಗಳು ಕೆಂಪು ಹಾಸಿನ ಸ್ವಾಗತ ಕೋರಿದ್ದಾರೆ.

ಟಿಯಾಂಜಿನ್‌ನಲ್ಲಿ ವಂದೇ ಮಾತರಂ :

ಪ್ರಧಾನಿ ಮೋದಿ ಉಳಿದುಕೊಳ್ಳಲಿರುವ ಟಿಯಾಂಜಿನ್ ಹೋಟೆಲ್ ನಲ್ಲಿ ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಭಾರತೀಯ ಸಮುದಾಯ, ಮೋದಿ ಅವರ ಐತಿಹಾಸಿಕ ಚೀನಾ ಭೇಟಿ ಕಣ್ಣುಂಬಿಕೊಂಡಿತು. ಈ ವೇಳೆ ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಘೋಷಣೆಗಳೊಂದಿಗೆ ಸ್ವಾಗತಿಸಲಾಯಿತು. ಸಾಂಸ್ಕೃ ತಿಕ ನೃತ್ಯ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮತ್ತು ಚೀನಾ ಕಲಾವಿದರಿಂದ ಸಿತಾ‌ರ್, ಸಂತೂರ್ ಮತ್ತು ತಬಲಾ ಇತ್ಯಾದಿ ಭಾರತೀಯ ಸಂಗೀತೋಪಕರಣ ನುಡಿಸುವ ಮೂಲಕ ಮೋದಿಯವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು.

 

Related Articles

error: Content is protected !!