ಬೆಂಗಳೂರು : ತಂತ್ರಜ್ಞಾನದಲ್ಲಿ ಸ್ಥಾವಲಂಬಿಗಳಾಗುವುದು ನಮ್ಮ ಮುಂದಿನ ದೊಡ್ಡ ಆದ್ಯತೆಯಾಗಿದೆ. ವಿಕಸಿತ ಭಾರತದ ಪಯಣವು ಡಿಜಿಟಲ್ ಇಂಡಿಯಾದೊಂದಿಗೆ ಕೈಜೋಡಿಸಿ ಮುಂದುವರಿಯಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದರು.
ಭಾನುವಾರ ಬೆಂಗಳೂರು ಮೆಟ್ರೋದ ಹಳದಿ ಮಾರ್ಗ ಉದ್ಘಾಟಿಸಿ, ಕಿತ್ತಳೆ ಮಾರ್ಗಕ್ಕೆ ಶಂಕಸ್ಥಾಪನೆ ನೆರವೇರಿಸಿದ ಅವರು, ಭಾರತ ಎಐ ಮಿಷನ್ ನಂತಹ ಉಪಕ್ರಮಗಳ ಮೂಲಕ ಭಾರತ ಜಾಗತಿಕ ನಾಯಕತ್ವದತ್ತ ಮುನ್ನಡೆಯುತ್ತಿದೆ. ಸೆಮಿ ಕಂಡಕ್ಟರ್ ಮಿಷನ್ ಕೂಡ ವೇಗವನ್ನು ಪಡೆಯುತ್ತಿದೆ ಮತ್ತು ಭಾರತವು ಶೀಘ್ರದಲ್ಲೇ ತನ್ನದೇ ಆದ ಮೇಡ್-ಇನ್-ಇಂಡಿಯಾ ಚಿಪ್ ಅನ್ನು ಹೊಂದಲಿದೆ ಎಂದು ಘೋಷಿಸಿದರು.
ಭಾರತವು ಕಡಿಮೆ ವೆಚ್ಚದ, ಹೈಟೆಕ್ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಜಾಗತಿಕ ಉದಾಹರಣೆಯಾಗಿದೆ. ಭಾರತವು ಭವಿಷ್ಯದ ತಂತ್ರಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಈ ಪ್ರಗತಿಯ ಅತ್ಯಂತ ಗಮನಾರ್ಹ ಅಂಶವೆಂದರೆ, ಬಡವರ ಸಬಲೀಕರಣ. ತಂತ್ರಜ್ಞಾನವು ಸರ್ಕಾರ ಮತ್ತು ನಾಗರಿಕರ ನಡುವಿನ ಅಂತರ ಕಡಿಮೆ ಮಾಡಲು ಸಹಾಯ ಮಾಡುತ್ತಿದೆ ಡಿಜಿಟಲೀಕರಣವು ಈಗ ದೇಶದ ಪ್ರತಿಯೊಂದು ಹಳ್ಳಿಯನ್ನು ತಲುಪಿದೆ. ಯುಪಿಐ ಮೂಲಕ ಭಾರತವು ವಿಶ್ವದ ನೈಜ- ಸಮಯದ ವಹಿವಾಟುಗಳಲ್ಲಿ ಶೇ.50ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ ಎಂದು ತಿಳಿಸಿದರು.

