Home » ಸೋಲು ಮರೆಮಾಚಿದ ಪಾಕಿಸ್ತಾನ : ಬಿಎಲ್‌ಎ
 

ಸೋಲು ಮರೆಮಾಚಿದ ಪಾಕಿಸ್ತಾನ : ಬಿಎಲ್‌ಎ

by Kundapur Xpress
Spread the love

ಇಸ್ಲಾಮಾಬಾದ್ : ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ರೈಲನ್ನು ಹೈಜಾಕ್ ಮಾಡಿದ ಬಲೂಚ್ ವಿಮೋಚನಾ ಸೇನೆ (ಬಿಎಲ್‌ಎ) 21 ಪ್ರಯಾಣಿಕರು ಮತ್ತು ನಾಲ್ವರು ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿದ್ದ ಎಲ್ಲಾ 33 ಬಿಎಲ್‌ಎ ಸೇನಾ ಸಿಬ್ಬಂದಿಯನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಪಾಕಿಸ್ತಾನ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ದುನ್ಯಾ ಮಾಹಿತಿ ನೀಡಿದ್ದಾರೆ.

ಅದ್ಯಾಗೂ ಈ ಬಗ್ಗೆ ಖಚಿತ ಮಾಹಿತಿ ಎಲ್ಲೂ ಬಹಿರಂಗಗೊಂಡಿಲ್ಲ. ಬಲೂಚಿಸ್ತಾನದಲ್ಲಿ ಕಾರ್ಯಾಚರಣೆಯು ತಾರ್ಕಿಕ ಅಂತ್ಯ ತಲುಪಿದ್ದಕ್ಕಾಗಿ ನಾವು ಅಲ್ಲಾಹನಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದೂ ಹೇಳಿದ್ದಾರೆ. ಸಶಸ್ತ್ರ ಪಡೆಗಳು ಬುಧವಾರ ಸಂಜೆ ಎಲ್ಲಾ ಭಯೋತ್ಪಾದಕರನ್ನು ಕೊಲ್ಲುವ ಮೂಲಕ ಮತ್ತು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸುವ ಮೂಲಕ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿವೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಲೆಫ್ಟಿನೆಂಟ್ ಜನರಲ್ ಷರೀಫ್ ಹೇಳಿದ್ದಾರೆ.

ಈ ಬೆನ್ನಲ್ಲೇ ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್‌ ಗೆ ಸಂಬಂಧಿಸಿದಂತೆ ಪಾಕಿಸ್ತಾನ ಸೇನೆಯ ಹೇಳಿಕೆಯನ್ನು ಸುಳ್ಳು ಎಂದು ಕರೆದಿರುವ ಬಿಎಲ್‌ಎ ತೀವ್ರ ಹೋರಾಟ ಮುಂದುವರೆದಿದೆ. ಪಾಕಿಸ್ತಾನ ಪಡೆಗಳು ಭಾರಿ ನಷ್ಟವನ್ನು ಅನುಭವಿಸುತ್ತಿವೆ ಎಂದು ಹೇಳಿದೆ. ವಾಸ್ತವವೆಂದರೆ ಯುದ್ಧವು ಅನೇಕ ರಂಗಗಳಲ್ಲಿ ಮುಂದುವರೆದಿದೆ, ಮತ್ತು ಶತ್ರು (ಪಾಕಿಸ್ತಾನಿ ಮಿಲಿಟರಿ) ಭಾರಿ ಸಾವುನೋವುಗಳು ಮತ್ತು ಮಿಲಿಟರಿ ನಷ್ಟವನ್ನು ಅನುಭವಿಸುತ್ತಿದೆ ಎಂದು ಬಿಎಲ್‌ಎ ಹೇಳಿಕೆಯಲ್ಲಿ ತಿಳಿಸಿದೆ.

 

Related Articles

error: Content is protected !!