ನವದೆಹಲಿ : ‘2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋದ್ರೋತ್ತರ ಗಲಭೆಗಳ ಕುರಿತಾದ ಚರ್ಚೆಗಳೆಲ್ಲಾ ನನ್ನ ರಾಜಕೀಯ ವಿರೋಧಿಗಳು, ನನ್ನ ವಿರುದ್ಧ ಹೆಣೆದಿದ್ದ ಕಟ್ಟು ಕಥೆಗಳು, ಹಿಂಸೆಯ ಬಳಿಕ ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು (ಕಾಂಗ್ರೆಸ್ ಪಕ್ಷ) ನನಗೆ ಶಿಕ್ಷೆಯಾಗುವುದನ್ನು ಬಯಸಿದ್ದರು, ಆದರೆ ಕೊನೆಗೆ ನ್ಯಾಯಾಲಯ ನನ್ನನ್ನು ನಿರ್ದೋಷಿ ಎಂದು ಘೋಷಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಭಾನುವಾರ ಪ್ರಸಾರವಾದ ಅಮೆರಿಕದ ಖ್ಯಾತ ಪಾಡ್ ಕಾಸ್ಟರ್ ಲೆಕ್ಸ್ ಫ್ರೀಡ್ ಮನ್ ಅವರೊಂದಿಗಿನ 3 ಗಂಟೆ 17 ನಿಮಿಷದ ಪಾಡ್ ಕಾಸ್ಟ್‌ನಲ್ಲಿ ಗುಜರಾತ್ ಗಲಭೆ, ಆರ್.ಎಸ್.ಎಸ್, ಭಾರತ- ಚೀನಾ ಸಂಬಂಧ- ಅಮೆರಿಕ-ಉಕ್ರೇನ್ ಯುದ್ಧ, ಧ್ಯಾನ, ಉಪವಾಸ, ಶಿಕ್ಷಣ, ತಮ್ಮ ಬಾಲ್ಯ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲಾದ ವಿಷಯಗಳ ಬಗ್ಗೆ ಮೋದಿ ಸುದೀರ್ಘವಾಗಿ ಮಾತನಾಡಿದ್ದಾರೆ.
ಈ ವೇಳೆ ಗೋದ್ರೋತ್ತರ ಗಲಭೆ ವಿಷಯದಲ್ಲಿ ತಮ್ಮನ್ನು ಹೇಗೆ ಬಲಿಪಶು ಮಾಡುವ ಯತ್ನ ನಡೆಯಿತು ಎಂಬುದರ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ

ಮೋದಿ ಹೇಳಿದ್ದು
# 2002ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ನಂತರ ಗುಜರಾತ್ ಗಲಭೆ ನಡೆದಿತ್ತು
# ಈ ಗಲಭೆಗೆ ನಾನು ಕಾರಣ ಎಂದು ಬಿಂಬಿಸುವ ಯತ್ನ
# ರಾಜಕೀಯ ವಿರೋಧಿಗಳಿಂದ ನನ್ನ ವಿರುದ್ಧ ಸುಳ್ಳು ಕಥೆ ಸೃಷ್ಟಿ
• ನನಗೆ ಶಿಕ್ಷೆಯಾಗುವುದನ್ನು ನನ್ನ ವಿರೋಧಿಗಳು ಬಯಸಿದ್ದರು
# ಆದರೆ ನ್ಯಾಯಾಲಯ ನನ್ನನ್ನು ನಿರಪರಾಧಿ ಎಂದು ಹೇಳಿತು
# ನಂತರದ 22 ವರ್ಷದಲ್ಲಿ ಗುಜರಾತಲ್ಲಿ ಒಂದೂ ಗಲಭೆ ಆಗಿಲ್ಲ

