ಗುಜರಾತ್ : ಭಾರತವನ್ನು ರಕ್ಷಿಸುವ ಶಕ್ತಿಸಾಮರ್ಥ್ಯ ದೇಶದ ಸಮರ್ಥ ಸೇನಾಪಡೆಗಿದೆ ಎಂಬ ದೃಢನಂಬಿಕೆ ದೇಶವಾಸಿಗಳಿಗಿದೆ. ಈ ನಂಬಿಕೆಗೆ ಬಲವೆಂಬಂತೆ, ದೇಶದ ಗಡಿಗಳಲ್ಲಿನ ಒಂದಿಂಚು ಜಾಗದ ವಿಚಾರದಲ್ಲೂ ಭಾರತ ಸಂಧಾನದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂಬುದನ್ನು ತೋರಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ಭಾರತೀಯ ಸೇನೆಯನ್ನು ನೇರಾನೇರ ಕಂಡ ಕ್ಷಣವೇ ಭಾರತದ ಶತ್ರುಗಳ ದುಷ್ಪ ಸಂಚುಗಳು ನುಚ್ಚು ನೂರಾಗಲಿವೆ. ದೇಶದ ಯೋಧರಿಂದಾಗಿ ದೇಶವಿಂದು ಸುರಕ್ಷಿತವಾಗಿದೆ ಎಂಬ ಆತ್ಮವಿಶ್ವಾಸ ದೇಶದ ಜನರಲ್ಲಿ ಬಲಯುತವಾಗಿದೆ. ನಿಮ್ಮನ್ನು ಕಂಡಾಗ ದೇಶದ ಶಕ್ತಿ ಏನೆಂಬುದು ಇಡೀ ಜಗತ್ತಿಗೆ ಅರಿವಾಗುತ್ತದೆ, ಶತ್ರುಗಳು ನಿಮಗೆ ಮುಖಾಮುಖಿಯಾದ ಕ್ಷಣವೇ ಅವರ ಎಲ್ಲಾ ದುಷ್ಟ ಸಂಚುಗಳು ಹೀನಾಯವಾಗಿ ಅಂತ್ಯವಾಗಿ ಬಿಡುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಯೋಧರನ್ನು ಉದ್ದೇಶಿಸಿ ವಿಶ್ವಾಸ ವ್ಯಕ್ತಪಡಿಸಿದರು
ದೇಶದ ಗಡಿಯಲ್ಲಿನ ಒಂದಿಂಚು ಭೂಮಿಯ ವಿಚಾರದಲ್ಲೂ ಯಾರೊಂದಿಗೂ ಸಂಧಾನದ ಮಾತೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದರು.