62
ರಿಯೊ ಡಿ ಜನೈರೊ : ಬ್ರಿಕ್ಸ್ ಆರ್ಥಿಕ ಸಹಕಾರ ಮತ್ತು ಜಾಗತಿಕ ಒಳಿತಿಗಾಗಿ ಪ್ರಬಲ ಶಕ್ತಿಯಾಗಿ ಉಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುಂಪಿನ ಸದಸ್ಯ ರಾಷ್ಟ್ರಗಳ ಹಲವಾರು ಉನ್ನತ ನಾಯಕರು ಬ್ರೆಜಿಲ್‌ನ ಕಡಲ ತೀರದ ನಗರದಲ್ಲಿ ಶೃಂಗಸಭೆಯ ಮಾತುಕತೆ ನಡೆಸಲು ಒಂದೆಡೆ ಸೇರಿದ್ದಾರೆ
ಪ್ರಭಾವಿ ಗುಂಪಿನ ಪ್ರಸ್ತುತ ಅಧ್ಯಕ್ಷರಾಗಿರುವ ಬ್ರೆಜಿಲ್ ಆತಿಥ್ಯ ವಹಿಸಿರುವ ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ಗೈರಾಗಿದ್ದಾರೆ. ಬ್ರೆಜಿಲ್‌ಗೆ ನಾಲ್ಕು ದಿನಗಳ ಪ್ರವಾಸದಂಗ ಭಾನುವಾರ ರಿಯೊ ಡೆ ಜನೈರೊ ತಲುಪಿದ ಪ್ರಧಾನಿ ಮೋದಿ, 17ನೇ ಬ್ರಿಕ್ಸ್ ಶೃಂಗಸಭೆ ಉದ್ದೇಶಿಸಿ ಮಾತನಾಡಿದರು.
ಶೃಂಗಸಭೆಯಲ್ಲಿ ಜಾಗತಿಕ ಪ್ರಾಮುಖ್ಯತೆಯ ಶಾಂತಿ ಮತ್ತು ಭದ್ರತೆ, ಬಹುಪಕ್ಷೀಯವಾದದ ಬಲವರ್ಧನೆ, ಅತ್ಯಂತ ಹೊಣೆಗಾರಿಕೆಯೊಂದಿಗೆ ಕೃತಕ ಬುದ್ದಿಮತ್ತೆ ಬಳಕೆ, ಹವಾಮಾನ ವೈಪರೀತ್ಯ ತಡೆಯಲು ಕ್ರಮ, ಜಾಗತಿಕ ಆರೋಗ್ಯ, ಆರ್ಥಿಕ ಮತ್ತು ಹಣಕಾಸು ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.

