Home » ವಿಶ್ವದ ಸುಭೀಕ್ಷೆಗೆ ಯೋಗ ಪ್ರಬಲ ಮಾಧ್ಯಮ
 

ವಿಶ್ವದ ಸುಭೀಕ್ಷೆಗೆ ಯೋಗ ಪ್ರಬಲ ಮಾಧ್ಯಮ

by Kundapur Xpress
Spread the love

ಶ್ರೀನಗರ : ಜಾಗತಿಕ ಒಳಿತಿಗೆ ವಿಶ್ವದ ಸುಭೀಕ್ಷೆಗೆ ಪ್ರಬಲ ಮಾಧ್ಯಮ ಯೋಗಾಭ್ಯಾಸವೆಂಬುದು ಇಡೀ ಜಗತ್ತಿಗೆ ಮನದಟ್ಟಾಗಿದ್ದು, ಯೋಗದ ಬಗ್ಗೆ ಇಡೀ ಜಗತ್ತು ಆಶಾವಾದ, ಆತ್ಮವಿಶ್ವಾಸ ಕಾಯ್ದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ, ಶ್ರೀನಗರದ ದಾಲ್ ಸರೋವರ ತೀರದಲ್ಲಿನ ಎಸ್‌ಕೆಐಸಿಸಿಯಲ್ಲಿ ಶುಕ್ರವಾರ ಮುಂಜಾನೆ ವಿಧ್ಯುಕ್ತ ಚಾಲನೆ ನೀಡಿ ಪ್ರಧಾನಿ ಮಾತನಾಡಿದರು. ಮೋದಿ ನೇತೃತ್ವದಲ್ಲಿ ಏಕಕಾಲಕ್ಕೆ ಇಡೀ ಜಗತ್ತಿಗೆ ಜಗತ್ತು ದಿನವನ್ನು ಆಚರಿಸಿರುವುದು ಗಮನಾರ್ಹ.

ಮಾನವ ಸಮುದಾಯಕ್ಕೆ ಪ್ರಯೋಜನ-

ಯೋಗವು ದೇವರನ್ನು ತಲುಪಲಿರುವ ಆಧ್ಯಾತ್ಮಿಕ ಪಯಣದ ಹಾದಿ ಎಂದು ಜನರು ವ್ಯಾಖ್ಯಾನಿಸುತ್ತಾರೆ. ಆಧ್ಯಾತ್ಮಿಕ ಪಯಣವನ್ನು ಮುಂದೆ ಎಂದಾದರೊಂದು ದಿನ ಕೈಗೊಳ್ಳಬಹುದು. ಇದೀಗ ವ್ಯಕ್ತಿತ್ವ ವಿಕಸನ, ಶಾರೀರಿಕ ದಾರ್ಢತೆಗೆ ಆದ್ಯತೆ ನೀಡುವುದರಿಂದ ಯೋಗ ಇದರ ಭಾಗವಾಗಿದೆ. ಯೋಗದಿಂದ ಶಾರೀರಿಕ ಆರೋಗ್ಯ, ವ್ಯಕ್ತಿತ್ವ ವಿಕಸನ ಸಾಧ್ಯ. ಇದರಿಂದ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆ. ವ್ಯಕ್ತಿತ್ವ ವಿಕಸನದಿಂದ ಸಮಾಜಕ್ಕೆ ಪ್ರಯೋಜನವಿದೆ. ತನ್ಮೂಲಕ ಇಡೀ ಮಾನವ ಸಮುದಾಯಕ್ಕೆ ಅನುಕೂಲವಾಗುತ್ತದೆ ಎಂದವರು ಶೇರ್-ಎ.ಕಾಶ್ಮೀರ್ ಇಂಟರ್‌ನ್ಯಾಷನಲ್ ಕನ್ವೆನ್ಸನ್ ಸೆಂಟರ್‌ನಲ್ಲಿ ಜನಸ್ತೋಮವನ್ನು ಉದ್ದೇಶಿಸಿ ನುಡಿದರು.

   

Related Articles

error: Content is protected !!