ಸೋನಾಮಾರ್ಗ್: “ಮೋದಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಸರಿಯಾದ ಕೆಲಸ ಸರಿಯಾದ ಸಮಯದಲ್ಲಿ ನಡೆಯುತ್ತದೆ ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುವ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ನೀಡಿದ್ದಾರೆ.
ಕಾಶ್ಮೀರ ಮತ್ತು ಸೋನಾಮಾರ್ಗ್ ಅನ್ನು ಸಂಪರ್ಕಿಸುವ 2,700 ಕೋಟಿ ವೆಚ್ಚದ ಸುರಂಗ ಮಾರ್ಗವನ್ನು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಪರೋಕ್ಷವಾಗಿ ಈ ಭರವಸೆ ನೀಡಿದರು
ಇದಕ್ಕೂ ಮುನ್ನ ಮಾತನಾಡಿದ್ದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸೆಪ್ಟೆಂಬ ರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ಕೊಟ್ಟ ಮಾತಿನಿಂತೆ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಬೇಕು ಮೋದಿ ಅವರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆಂಬುದು ನನ್ನ ನಂಬಿಕೆಎಂದು ಹೇಳಿದ್ದರು.
ನಂತರ ಮಾತನಾಡಿದ ಪ್ರಧಾನಿ ತಮ್ಮ ಭಾಷಣದಲ್ಲಿ ರಾಜ್ಯ ಸ್ಥಾನಮಾನ ಕುರಿತು ನೇರವಾಗಿ ಎಲ್ಲೂ ಪ್ರಸ್ತಾಪಿಸದಿದ್ದರೂ, ಇದು ಮೋದಿ ಎಂಬುದನ್ನು ನೀವು ಅರಿತುಕೊಳ್ಳಬೇಕು. ಮೋದಿ ತಮ್ಮ ಮಾತು ಉಳಿಸಿಕೊ ಳ್ಳುತ್ತಾರೆ. ಪ್ರತಿಯೊಂದಕ್ಕೂ ಸರಿಯಾದ ಕಾಲ ಬರಬೇಕು ಸರಿಯಾದ ಕೆಲಸ ಸರಿಯಾದ ಸಮಯದಲ್ಲೇ ನಡೆಯುತ್ತದೆ ಎಂದು ಸೂಚ್ಯವಾಗಿ ಹೇಳಿದರು.