123
ಹೊಸದಿಲ್ಲಿ: ಆಪರೇಷನ್ ಸಿಂದೂರ ಕೇವಲ ಕಾರ್ಯಾಚರಣೆಯಲ್ಲ, ಬದಲಾಗುತ್ತಿರುವ ಭಾರತದ ಸ್ವರೂಪವಾಗಿದೆ. ದೇಶದ ಸಂಕಲ್ಪ ಬದ್ಧತೆ, ಧೈರ್ಯ ಮತ್ತು ಜಾಗತಿಕ ರಂಗದಲ್ಲಿ ರಾಷ್ಟ್ರ ಮತ್ತಷ್ಟು ಶಕ್ತಿಶಾಲಿಯಾಗುತ್ತಿರುವುದನ್ನು ಆಪರೇಷನ್ ಸಿಂದೂರ ಪ್ರತಿಫಲಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ದ ಜಾಗತಿಕ ಹೋರಾಟದಲ್ಲೊಂದು ತಿರುವಾಗಿದೆ ಆಪರೇಷನ್ ಸಿಂದೂರ. ಭಾರತದ ಶಕ್ತಿ ಸಾಮರ್ಥ್ಯಗಳು ಕ್ಷಿಪ್ರಗತಿಯಲ್ಲಿ ವರ್ಧಿಸುತ್ತಿರುವುದು ಮತ್ತು ದೇಶದ ಸಂಕಲ್ಪದಲ್ಲಿನ ದೃಢತೆ- ಸ್ಪಷ್ಟತೆಯನ್ನು ಸಾರಿದೆ ಎಂದವರು ತಿಂಗಳ ಮನ್ ಕೀ ಬಾತ್‌ನಲ್ಲಿ ಸ್ಪಷ್ಟಪಡಿಸಿದರು.
ಆಪರೇಷನ್ ಸಿಂದೂರದಿಂದಾಗಿ ಇಡೀ ದೇಶ ಎಂದು ರಾಷ್ಟ್ರಭಕ್ತಿಯಿಂದ ತುಡಿಯುತ್ತಿದೆ. ಜನರು ಆಮದು ವಸ್ತುಗಳ ತಿರಸ್ಕರಿಸಿ ದೇಶೀ ವಸ್ತುಗಳನ್ನೇ ಹೊಂದುವ ಘೋಷಣೆ ಮಾಡುತ್ತಿ ದ್ದಾರೆ. ಸ್ವಾವಲಂಬನೆಯ ಭಾವ ಜಾಗೃತವಾಗಿದೆ. ಇಡೀ ದೇಶವಿಂದು ಭಯೋತ್ಪಾದನೆ ವಿರುದ್ಧ ಆಕ್ರೋಶ, ದೃಢ ಸಂಕಲ್ಪ ಸಹಿತ ಒಗ್ಗಟ್ಟಾಗಿ ಸೆಟೆದು ನಿಂತಿದೆ. ಇದೇ ದೇಶದ ನಿಜವಾದ ಶಕ್ತಿ ಎಂದರು

