87
ಕಾನನಾಸ್ಟಿಸ್ : ಕೆನಡಾದಲ್ಲಿ ನಡೆದ ಜಿ7 ಸಮ್ಮೇಳನದಲ್ಲಿ ಭಾಗಿಯಾಗಿದ್ದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇನ್ನೊಂದು ಕಡೆ ಪ್ರಧಾನಿ ಮೋದಿಯವರನ್ನು ನೋಡುತ್ತಲೇ ನಗು ಮುಖದಿಂದ ಹಸ್ತಲಾಘವ ಮಾಡಿದ್ದು, ನೀವು ಯಾವಾಗಲೂ ಶ್ರೇಷ್ಠರು, ನಿಮ್ಮಂತೆಯೇ ಆಗಲು ಪ್ರಯತ್ನಿಸುತ್ತಿದ್ದೇನೆ ಎಂದು ಹೊಗಳಿದ್ದಾರೆ.
ಇಟಲಿ ಮತ್ತು ಭಾರತ ಶ್ರೇಷ್ಠ ಸ್ನೇಹದ ಕೊಂಡಿಯಾಗಿವೆ ಎಂದು ಮೆಲೋನಿ ತಮ್ಮ ಎಕ್ಸ್‌ನಲ್ಲಿ ಬರೆದಿದ್ದು, ಭಾರತ ಮತ್ತು ಇಟಲಿ ಸ್ನೇಹ ನಮ್ಮ ಜನರಿಗಾಗಿ ಇನ್ನಷ್ಟು ಶಕ್ತಿಶಾಲಿಯಾಗಿ ಮುಂದುವರಿಯಲಿದೆ ಎಂದು ಮೋದಿ ಉತ್ತರಿಸಿದ್ದಾರೆ. ಮೆಲೋನಿ ಸಂಭಾಷಣೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಲೋನಿ ಅಭಿಮಾನಿಗಳಿಗೆ ಸಂತಸ ನೀಡಿದೆ.

