ಮಾಸ್ಕೋ : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ರಷ್ಯಾ ಪ್ರವಾಸ ಸೋಮವಾರ ಆರಂಭವಾಗಿದೆ. ಮೊದಲ ದಿನ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಖಾಸಗಿ ಔತಣ ನೀಡಿದ್ದಾರೆ. ಮಂಗಳವಾರ ಇಂಡೋ- ರಷ್ಯಾ ಶೃಂಗ ನಡೆಯಲಿದೆ ಹಾಗೂ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಇದೇ ವೇಳೆ, ‘ಸೇಂಟ್ ಆ್ಯಂಡೂ…’ ಹೆಸರಿನ ರಷ್ಯಾದ ಅತ್ಯುಚ್ಚ ನಾಗರಿಕ ಗೌರವವನ್ನು ಅವರಿಗೆ ಪ್ರದಾನ ಮಾಡಲಾಗುತ್ತದೆ
ಸೋಮವಾರ ಸಂಜೆ ಮಾಸ್ಕೋಗೆ ಬಂದಿಳಿದ ಮೋದಿ ಅವರನ್ನು ರಷ್ಯಾದ ಮೊದಲ ಉಪಪ್ರಧಾನಿ ಡೆನಿಸ್ ಮನುಟ್ರೋವ್ ಸ್ವಾಗತಿಸಿದರು.ಈ ವೇಳೆ ರಷ್ಯಾದ ಯುವತಿಯರು ಭರತ ನಾಟ್ಯ ಮಾಡಿದ್ದು ವಿಶೇಷವಾಗಿತ್ತು. ಬಳಿಕ ಪುಟಿನ್ ಅವರು ಮೋದಿ ಅವರಿಗೆ ಖಾಸಗಿ ಔತಣ ಹಮ್ಮಿಕೊಂಡಿದ್ದರು. ಪುಟಿ ನ್ ತಮ್ಮ ಆಪ್ತರಿಗೆ ಮಾತ್ರ ಈ ಔತಣ ನೀಡುತ್ತಾರೆ. ರಷ್ಯಾಗೆ ಬರುವ ಎಲ್ಲ ವಿದೇಶಿ ನಾಯಕರಿಗೆ ಈ ರೀತಿ ಔತಣ ನೀಡು ವುದಿಲ್ಲ ಎಂಬುದು ಇಲ್ಲಿ ಗಮನಾರ್ಹ. ಈ ವೇಳೆ ಉಕ್ರೇನ್ -ರಷ್ಯಾ ಯುದ್ಧದ ಬಗ್ಗೆ ಇಬ್ಬರ ನಡುವೆ ಅನೌಪಚಾರಿಕ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ