ಕೀವ್ : ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಪೋಲೆಂಡ್ ಪ್ರವಾಸ ಮುಗಿಸಿ ಶುಕ್ರವಾರ ಮುಂಜಾನೆ ಉಕ್ರೇನ್‌ಗೆ ಬಂದಿಳಿದಿದ್ದಾರೆ. ವಿಶೇಷವೆಂದರೆ ಪೋಲೆಂಡ್‌ನಿಂದ ಉಕ್ರೇನ್ ರಾಜಧಾನಿ ಕೀವ್‌ಗೆ ಆಗಮಿಸಲು ಮೋದಿ ಬಳಸಿದ್ದು ಐಷಾರಾಮಿ ‘ಟ್ರೈನ್ ಫೋರ್ಸ್ ಒನ್ ರೈಲು
ಗುರುವಾರ ರಾತ್ರಿ ಪೋಲೆಂಡ್‌ನಿಂದ ಹೊರಟ ಮೋದಿ ಸತತ 10 ಗಂಟೆ ಪ್ರಯಾಣ ಮಾಡಿ ಕೀವ್‌ಗೆ ಬಂದಿಳಿದರು. ಕೀವ್‌ನಲ್ಲಿ 7 ಗಂಟೆಗಳ ಕಾಲ ಇರುವ ಮೋದಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸ ಲಿದ್ದಾರೆ. ಇದು 1991ರಲ್ಲಿ ಉಕ್ರೇನ್ ಸ್ವಾತಂತ್ರ್ಯ ಪಡೆದ ಬಳಿಕ ಅಲ್ಲಿಗೆ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದೆ. ಈ ಭೇಟಿ ಬಳಿಕ ಮರಳಿ ರೈಲಿನಲ್ಲೇ ಮೋದಿ ಪೋಲೆಂಡ್‌ಗೆ ತೆರಳಲಿದ್ದಾರೆ.
ಹಾಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆಯ ಕಾರಣಕ್ಕಾಗಿ ಮೋದಿ ರೈಲಿನಲ್ಲಿ ಸಂಚಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ