Home » ಮೋದಿ – ವ್ಯಾನ್ಸ್‌ ವ್ಯಾಪಾರ ಚರ್ಚೆ
 

ಮೋದಿ – ವ್ಯಾನ್ಸ್‌ ವ್ಯಾಪಾರ ಚರ್ಚೆ

by Kundapur Xpress
Spread the love

ನವದೆಹಲಿ : ಪರಿವಾರ ಸಮೇತರಾಗಿ ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಪ್ರಧಾನಿ ನರೆಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದನ್ನು ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧದಲ್ಲಿ ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೋದಿ ಕೂಡ ಚರ್ಚೆ ಆಶಾದಾಯಕವಾಗಿತ್ತು ಎಂದಿದ್ದಾರೆ.

ಭಾರತದ ಆಮದುಗಳ ಮೇಲೆ ಅಮೆರಿಕ ಹೇರಿದ್ದ ಶೇ.26ರಷ್ಟು ತೆರಿಗೆಗೆ 90 ದಿನಗಳ ತಡೆ ನೀಡಲಾಗಿರುವ ಈ ಹೊತ್ತಿನಲ್ಲಿ ಮೋದಿ ಮತ್ತು ವಾನ್ಸ್ ನಡುವೆ ದ್ವಿಪಕ್ಷೀಯ ವ್ಯಾಪಾರದ ಕುರಿತು ಚರ್ಚೆ ನಡೆದಿದೆ. ಜೊತೆಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಲ್ಲಿನ ಪ್ರಗತಿಯನ್ನು ಸ್ವಾಗತಿಸಿದ ನಾಯಕರಿಬ್ಬರೂ, ಅದರ ಪ್ರಗತಿಯನ್ನು ಪರಿಶೀಲಿಸಿದರು ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಇದೇ ವೇಳೆ, ಜನವರಿಯಲ್ಲಿ ಅಮೆರಿಕಕ್ಕೆ ಭೇಟಿ ನೀಡಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದದ್ದನ್ನು ಮೋದಿ ಸ್ಮರಿಸಿದರು. ಅಂತೆಯೇ, ಅವರಿಬ್ಬರೂ ಪರಸ್ಪರ ಆಸಕ್ತಿಯ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡು, ಶಕ್ತಿ, ಭದ್ರತೆ, ವ್ಯೂಹಾತ್ಮ ತಂತ್ರಜ್ಞಾನಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಮುಂದುವರೆಸುವ ಭರವಸೆ ವ್ಯಕ್ತಪಡಿಸಿದರು. ವರ್ಷಾಂತ್ಯಕ್ಕೆ ಟ್ರಂಪ್ ಭಾರತ ಭೇಟಿಯನ್ನು ಎದುರು ನೋಡು ತ್ತಿರುವುದಾಗಿ ಮೋದಿ ತಿಳಿಸಿದರು.

ಅತ್ತ ವ್ಯಾನ್ಸ್ ಜತೆ ಆಗಮಿಸಿರುವ ಅಧಿಕಾರಿಗಳು ಭಾರತದ ಅಧಿಕಾರಿಗಳ ಜತೆ ದ್ವಿಪಕ್ಷೀಯ ಸಭೆ ನಡೆಸಿದರು.

 

Related Articles

error: Content is protected !!