Home » ಪೋಪ್‌ ಫ್ರಾನ್ಸಿಸ್‌ ಅಸ್ತಂಗತ
 

ಪೋಪ್‌ ಫ್ರಾನ್ಸಿಸ್‌ ಅಸ್ತಂಗತ

by Kundapur Xpress
Spread the love

ವ್ಯಾಟಿಕನ್ ಸಿಟಿ : ತಮ್ಮ ವಿನಮ್ರತೆ ಮತ್ತು ಬಡವರ ಬಗೆಗಿನ ಕಾಳಜಿಯಿಂದ ಗಮನಸೆಳೆದಿದ್ದ ಕ್ಯಾಥೋಲಿಕ್ ಕ್ರೈಸ್ತ ಮತದ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಸೋಮವಾರ ಪ್ರಕಟಿಸಿದೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಪೋಪ್ ಅವರ ನಿಧನದಿಂದ ಜಗತ್ತಿನೆಲ್ಲೆಡೆ ಇರುವ ಕ್ರೈಸ್ತ ಸಮುದಾಯದಲ್ಲಿ ಶೋಕ ಮಡುಗಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ನಾಯಕರು ಕಂಬನಿ ಮಿಡಿದಿದ್ದಾರೆ.

12 ವರ್ಷ ಅಧಿಕಾರ :

ಪೋಪ್ ತಮ್ಮ 12 ವರ್ಷಗಳ ಅಧಿಕಾರಾವಧಿಯಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಡಬಲ್ ನ್ಯುಮೋನಿಯಾದ ಗಂಭೀರ ಅಪಾಯದಿಂದ ಬದುಕುಳಿದಿದ್ದರು. ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಲ್ಲಿ ಕಾಣಿಸಿ ಕೊಳ್ಳುವ ಮೂಲಕ ಈಸ್ಟರ್ ಭಾನುವಾರದಂದು ವ್ಯಾಟಿಕನ್‌ನಲ್ಲಿ ಭಕ್ತರನ್ನು ಖುಷಿಪಡಿಸಿದ ಒಂದು ದಿನದ ನಂತರ  ಸೋಮವಾರದಂದು ಪೋಪ್ ನಿಧನರಾದರು 

 

Related Articles

error: Content is protected !!