Home » ಶಾಂಘೈ ಶೃಂಗಸಭೆಗೆ ಬರಲು ಮೋದಿ ಉತ್ಸುಕ : ಚೀನಾ ಹರ್ಷ
 

ಶಾಂಘೈ ಶೃಂಗಸಭೆಗೆ ಬರಲು ಮೋದಿ ಉತ್ಸುಕ : ಚೀನಾ ಹರ್ಷ

ಟ್ರಂಪ್-ಭಾರತ ಸಂಘರ್ಷಮಧ್ಯೆ ಮೋದಿ-ಕ್ಸಿ ಆಪ್ತತೆ

by Kundapur Xpress
Spread the love

ಬೀಜಿಂಗ್ : ಅಮೆರಿಕದ ಜತೆ ಭಾರತ ವ್ಯಾಪಾರ ಸಂಘರ್ಷಕ್ಕೆ ಇಳಿದಿರುವ ನಡುವೆಯೇ ಚೀನಾದ ಟಿಯಾಂಜಿನ್‌ನಲ್ಲಿ ಮಾಸಾಂತ್ಯದಲ್ಲಿ ನಡೆಯಲಿರುವ ಶಾಂಫೈ ಶೃಂಗಸಭೆಗೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ರಂಪ್‌ ವೈರಿ ದೇಶವಾದ ಚೀನಾ ಅಧಿಕೃತವಾಗಿ ಆಹ್ವಾನಿಸಿದೆ. ಅಲ್ಲದೆ, ಮೋದಿ ಶಾಂಫೈಗೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ ಎಂಬ ವರದಿಗಳನ್ನು ಸ್ವಾಗತಿಸಿದೆ.

ಈ ಬಗ್ಗೆ ಚೀನಾದ ಕ್ಸಿಜೆನ್‌ಪಿಂಗ್‌ ಸರ್ಕಾರದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ‘ಆ.31ರಿಂದ ಸೆ.1ರ ವರೆಗೆ ಟಿಯಾಂಜಿನ್‌ನಲ್ಲಿ ಎಸ್‌ಸಿಒ ಶೃಂಗಸಭೆ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾ ಆಹ್ವಾನಿಸುತ್ತಿದೆ.

ಎಲ್ಲಾ ರಾಷ್ಟ್ರಗಳ ಸಂಘಟಿತ ಪ್ರಯತ್ನದಿಂದ, ಇದು ಒಗ್ಗಟ್ಟು, ಸ್ನೇಹ ಮತ್ತು ಫಲಪ್ರದ ಫಲಿತಾಂಶಗಳ ಸಭೆಯಾಗಲಿದೆ. ಅಂತೆಯೇ, ಎಸ್‌ಸಿಒ ಸಮನ್ವಯ, ಚೈತನ್ಯ ಮತ್ತು ಉತ್ಪಾದಕತೆಯನ್ನು ಒಳಗೊಂಡ ಉತ್ತಮ ಗುಣಮಟ್ಟದ ಅಭಿವೃ ದ್ಧಿಯ ಹೊಸ ಹಂತವನ್ನು ಪ್ರವೇಶಿಸುತ್ತದೆ ಎಂದು ನಾವು ನಂಬಿದ್ದೇವೆ’ ಎಂದು ಹೇಳಿದೆ.

 

Related Articles

error: Content is protected !!