Home » ಸಿಯಾಟಲ್‌ ಗೋಪುರದ ಮೇಲೆ ತ್ರಿವರ್ಣ ಧ್ವಜ ಹಾರಾಟ
 

ಸಿಯಾಟಲ್‌ ಗೋಪುರದ ಮೇಲೆ ತ್ರಿವರ್ಣ ಧ್ವಜ ಹಾರಾಟ

by Kundapur Xpress
Spread the love

ನ್ಯೂಯಾರ್ಕ್/ ಸಿಯಾಟಲ್: ಇಲ್ಲಿನ 605 ಅಡಿ ಎತ್ತರದ ಬಾಹ್ಯಾಕಾಶ ಕೇಂದ್ರ ಕಟ್ಟಡದ ಗೋಪುರದ ಮೇಲೆ ಇದೇ ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜ ಹಾರಿಸಲಾಗಿದ್ದು, ಈ ಐತಿಹಾಸಿಕ ಗೋಪುರದಲ್ಲಿ ವಿದೇಶಿ ರಾಷ್ಟ್ರಧ್ವಜ ಹಾರಿಸಿದ್ದು ಇದೇ ಮೊದಲು.

ಭಾರತೀಯ ಸಿಯಾಟಲ್ ಪ್ರದೇಶದ ಭಾರತೀಯ ಸಮುದಾಯ ನೀಡಿದ ಕೊಡುಗೆಗಳನ್ನು ಸಂಭ್ರಮಿಸುವ ಉದ್ದೇಶದಿಂದ ಭಾರತದ 79ನೇ ಸ್ವಾತಂತ್ರ್ಯ ದಿನದಂದು ಭಾರತದ ರಾಷ್ಟ್ರಧ್ವಜ ಹಾರಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಯಾಟಲ್‌ನ ಪ್ರತಿನಿಧಿ ಪ್ರಕಾಶ್ ಗುಪ್ತಾ, ಸಿಯಾಟಲ್‌ನ ಮೇಯರ್ ಬ್ರೂಸ್ ಹ್ಯಾರೆಲ್ ಮತ್ತು ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು. ಇದಕ್ಕಿಂತಲೂ ಗೌರವದ ದಿನ ಇನ್ನೊಂದಿರಲು ಸಾಧ್ಯವಿಲ್ಲ. ಸಿಯಾಟಲ್ ಗೋಪುರದ ಮೇಲೆ ತ್ರಿವರ್ಣ ಧ್ವಜ ಹಾರಿಸಿರುವುದು ನಿಜಕ್ಕೂ ಒಂದು ಐತಿಹಾಸಿಕ ಕ್ಷಣ ಎಂದು ಸಿಯಾಟಲ್‌ನ ಭಾರತೀಯ ಪ್ರತಿನಿಧಿ ಪ್ರಕಾಶ್‌ ಗುಪ್ತಾ ಸಂತಸ ವ್ಯಕ್ತಪಡಿಸಿದ್ದಾರೆ.

 

Related Articles

error: Content is protected !!