ಮುಂಬೈ : ಭಿನ್ನ ಅಭಿಪ್ರಾಯಗಳ ಗೌರವಿಸಬೇಕು ಹೊಂದಾಣಿಕೆ ಸೌಹಾರ್ದ ಬದುಕಿಗೆ ಮುಖ್ಯ ಯಾರನ್ನೂ ಮೂಲೆಗುಂಪು ಮಾಡಕೂಡದು ಪ್ರತಿಯೋರ್ವರಿಗೂ ಬೆಳೆಯಲು ಅವಕಾಶ ಸಿಗಬೇಕು ಎಂದು ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗ್ಟತ್ ಕರೆ ನೀಡಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸಂಭ್ರಮಾಚರಣೆಯ ಜತೆ ಜತೆಗೆ ರಾಷ್ಟ್ರ ಪರ ನಮ್ಮ ಹೊಣೆಗಾರಿಕೆಯ ನೆನಪಿಸಿಕೊಳ್ಳಲು ಸದವಕಾಶ ಪ್ರಜಾತಂತ್ರ ದಿನಾಚರಣೆ ಎಂದರು.
ವಿವಿಧತೆಯಿಂದಾಗಿ ಭಾರತದ ಹೊರಗಡೆ ಸಂಘರ್ಷಗಳು ನಡೆಯುತ್ತೆ. ನಮಗೆ ವಿವಿಧತೆಯು ಬದುಕಿನ ಸಹಜ ಭಾಗ ನಿಮಗೆ ನಿಮ್ಮದೇ ವಿಶೇಷತೆಗಳಿರಬಹುದು. ಆದರೂ ನೀವು ಪರಸ್ಪರರಲ್ಲಿ ಸದ್ಭಾವನೆ ಕಾಯ್ದುಕೊಳ್ಳಬೇಕು ನೆಮ್ಮದಿ ಅಥವಾ ಸೌಹಾರ್ದದಿಂದ ಬದುಕಲು ಹೊಂದಾಣಿಕೆ ಬದ್ಧತೆ ಮುಖ್ಯವಾಗಿದ್ದು ನಿಮ್ಮ ಕುಟುಂಬ ಅಸಮಾಧಾನದಿಂದ ಇದ್ದಲ್ಲಿ ನಿಮಗೆ ನೆಮ್ಮದಿ ಖಂಡಿತ ಇರದು. ಅದೇ ರೀತಿ ಊರು ಸಂಕಷ್ಟದಲ್ಲಿರುವಾಗ ಆ ಊರಿನ ಕುಟುಂಬಗಳಿಗೂ ಅಶಾಂತಿ ಕಾಡುತ್ತದೆ ವಿನಾ ನೆಮ್ಮದಿ ಇರುವುದಿಲ್ಲ ಎಂದರು. ಅರಿವು ಮತ್ತು ಸಮರ್ಪಣಾಭಾವದಿಂದ ಕಾರ್ಯತತ್ಪರರಾಗುವ ಅಗತ್ಯವನ್ನು ಭಾಗ್ವತ್ ಪ್ರತಿಪಾದಿಸಿದರು.