ಮುಂಬೈ : ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸೋಮವಾರ ಸಂಜೆ ದಿಢೀರನೆ ಬೀಸಿದ ಧೂಳಿನ ಬಿರುಗಾಳಿ ಭಾರೀ ಅನಾಹುತ ಸೃಷ್ಟಿಸಿದೆ. ಬಲವಾದ ಗಾಳಿ ಬೀಸಿ ದೊಡ್ಡ ದೊಡ್ಡ ಬಿಲ್ ಬೋರ್ಡ್ ಉರುಳಿ ಬಿದ್ದು 8 ಜನರು ಸಾವನ್ನಪ್ಪಿದ್ದು,65 ಜನರು ಗಾಯಗೊಂಡಿದ್ದಾರೆ. ಗಾಳಿಯ ಬೆನ್ನಲ್ಲೇ ಮಳೆ ಕೂಡಾ ಸುರಿದಿದೆ
ಇದರಿಂದ ಕೆಲ ಗಂಟೆಗಳ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.ಮುಂಜಾಗ್ರತಾಕ್ರಮವಾಗಿ ಮುಂಬೈನ ಕೆಲವೆಡೆ ಮೆಟ್ರೋ, ಸ್ಥಳೀಯ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಿಮಾನ ಸಂಚಾರದಲ್ಲಿಯೂ ವ್ಯತ್ಯಯ ಉಂಟಾ ಗಿತ್ತು.ಧೂಳು ಮಿಶ್ರಿತ ಬಿರುಗಾಳಿ ಬೀಸುತ್ತಿದ್ದಂತೆ ಸುತ್ತಲು ಕತ್ತಲಿನ ವಾತವಾರಣ ಸೃಷ್ಟಿಯಾಗಿತ್ತು.
ಮೆಟ್ರೋ ಹಳಿಯ ಮೇಲೆ ಜಾಹೀರಾತು ಫಲಕ ಬಿದ್ದು, ಅರೇಯಾ ಮತ್ತು ಅಂಧೇರಿ ಪೂರ್ವದ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು.ಬಲವಾದ ಗಾಳಿಯಿಂದ ಥಾಣೆ ಮಾರ್ಗದ ರೈಲ್ವೆ ಹಳಿಗಳು ಬಾಗಿದ ಘಟನೆಯೂ ನಡೆದಿದೆ. ಕೆಲವು ಕಡೆ ಮೊಬೈಲ್ ಟವರ್ ಬಿದ್ದಿವೆ