ನವದೆಹಲಿ : ವಿಶ್ವದ ಅತಿ ಎತ್ತರದ ಯುದ್ಧ ಭೂಮಿಯಾದ ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿರುವ ಸಿಯಾಚಿನ್‌ನ ಸೇನಾ ಬೇಸ್ ಕ್ಯಾಂಪ್‌ಗೆ ಗುರುವಾರ ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ಭೇಟಿ ನೀಡಿದರು. ಸೇನಾ ಸಮವಸ್ತ್ರ ಧರಿಸಿದ ಅವರು ಸಿಯಾಚಿನ್ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಪ್ರತಿದಿನವೂ ಹಿಮ ಸುರಿಯುವ, ಮೈನಸ್ 50 ಡಿಗ್ರಿ ತಾಪಮಾನದಲ್ಲೂ ಗಡಿ ಕಾಯುವುದು ಸಾಮಾನ್ಯ ವಿಷಯವಲ್ಲ. ದೇಶ ರಕ್ಷಣೆಗೆ ಮುಂದಾಗಿರುವ ಸೈನಿಕರ ಶೌರ್ಯುವನ್ನು ಪ್ರತಿಯೊಬ್ಬ ನಾಗರಿಕನೂ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದರು. 2004ರ ಏಪ್ರಿಲ್‌ನಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಹಾಗೂ 2018ರ ಮೇನಲ್ಲಿ ರಾಮನಾಥ್ ಕೋವಿಂದ್ ಅವರು ಸಿಯಾಚಿನ್‌ಗೆ ಭೇಟಿ ನೀಡಿದ್ದರು.