Home » ದೇಶದಲ್ಲಿ ಸಮ್ಮಿಶ್ರ ಸರಕಾರ-ಮೂರನೇ ಭಾರಿಗೆ ಮೋದಿ ಪ್ರಧಾನಿ
 

ದೇಶದಲ್ಲಿ ಸಮ್ಮಿಶ್ರ ಸರಕಾರ-ಮೂರನೇ ಭಾರಿಗೆ ಮೋದಿ ಪ್ರಧಾನಿ

by Kundapur Xpress
Spread the love

ನವದೆಹಲಿ : 2024ರ ಲೋಕಸಭೆ ಚುನಾವಣೆ ಹಲವು ಅನಿರೀಕ್ಷಿತ ಫಲಿತಾಂಶಗಳಿಗೆ ಸಾಕ್ಷಿ ಆಗಿದ್ದು ಅಂದುಕೊಂಡಂತೆ ಬಿಜೆಪಿನೇತೃತ್ವದ ಎನ್ಎಡಿಎಗೆ 400 ಹಾಗೂ ಏಕಾಂಗಿಯಾಗಿ ಬಿಜೆಪಿಗೆ 370 ಸ್ಥಾನ ಬಂದಿಲ್ಲ. ಬಿಜೆಪಿ 240ರ ಸ್ಥಾನದ ಆಸುಪಾಸಿಗೆ ತೃಪ್ತಿಪಟ್ಟಿದ್ದು, ಮಿತ್ರಕೂಟದ ಸಹಾಯದಿಂದ ಸುಮಾರು 290ರ ಆಸುಪಾಸಿನಲ್ಲಿ ಸ್ಥಾನ ಪಡೆದು ಸರಳ ಬಹುಮತ ಪ್ರಾಪ್ತಿ ಮಾಡಿಕೊಂಡಿದೆ. ಇದರಿಂದಾಗಿ ಹಳೆಯ ಬಿಜೆಪಿ ಮಿತ್ರರಾದ ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ‘ಕಿಂಗ್‌ಮೇಕರ್ ‘ಗಳಾಗಿ ಹೊರಹೊಮ್ಮಿದ್ದು, ಅವರ ಬೆಂಬಲದಿಂದ ಇನ್ನು ಸಮ್ಮಿಶ್ರ ಸರ್ಕಾರ ನಡೆಯಲಿದೆ.

ಇದರೊಂದಿಗೆ, ಗೆಲುವಿನಲ್ಲಿ ಕೊಂಚ ಹಿನ್ನಡೆ ಅನುಭವಿಸಿದರೂ ಹ್ಯಾಟ್ರಿಕ್ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ. ಮಂಗಳವಾರ ನಡೆದ ಮತ ಎಣಿಕೆ ಕ್ಷಣಕ್ಷಣಕ್ಕೂ ತಿರುವು ಪಡೆದು ಕುತೂಹಲ ಕೆರಳಿಸಿತು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಬದಿಗೊತ್ತಿ ಫೀನಿಕ್ಸ್‌ನಂತೆ ಎದ್ದು ಸಾಮರ್ಥ ಪ್ರದರ್ಶಿಸಿತು. ಸುಮಾರು 230ರ ಆಸುಪಾಸಿನಲ್ಲಿ ಇಂಡಿಯಾ ಕೂಟ ಸ್ಥಾನ ಪಡೆಯಿತು. ಇದೇ ವೇಳೆ ಕಳೆದ 2 ಲೋಕಸಭೆ ಚುನಾವಣೆಗಳಲ್ಲಿ ಹೀನಾಯ ಪ್ರದರ್ಶನ ತೋರಿಸಿ ಕೇವಲ 50ರ ಆಸುಪಾಸಿನಲ್ಲಿ ಸ್ಥಾನಪಡೆದಿದ್ದಕಾಂಗ್ರೆಸ್ ಪಕ್ಷ ಈ ಸಲ ಭಾರಿ ಚೇತರಿಕೆ ಕಂಡು 90ಕ್ಕಿಂತ ಹೆಚ್ಚು ಸ್ಥಾನ ಪಡೆದಿದೆ.

   

Related Articles

error: Content is protected !!