ಹೊಸದಿಲ್ಲಿ: ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಹಣಕಾಸಿನ ನೆರವು ನೀಡಿರುವವರ ವಿರುದ್ಧ ಎನ್ಐಎ ಶನಿವಾರ ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ನಡೆಸಿದೆ. ಐದು ರಾಜ್ಯಗಳ 26 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿ, ನಾಲ್ವರನ್ನು ಬಂಧಿಸಿದೆ. ಇದೇ ವೇಳೆ ದೇಶಾದ್ಯಂತ ಹಿಂಸಾತ್ಮಕ ಭಯೋತ್ಪಾದಕ ದಾಳಿಗಳಿಗೆ ಯುವಕರನ್ನು ಪ್ರೇರೇಪಿಸುವ ಕಾರ್ಯದಲ್ಲಿ ತೊಡಗಿರುವ ಹಲವಾರು ಶಂಕಿತರನ್ನು ವಿಚಾರಣೆಗೊಳಪಡಿಸಿದೆ.
ಅಸ್ಸಾಂ, ಮಹಾರಾಷ್ಟ್ರ ಉತ್ತರ ಪ್ರದೇಶ, ದಿಲ್ಲಿ ಮತ್ತು ಜಮ್ಮು -ಕಾಶ್ಮೀರದ 26 ಕಡೆ ಶೋಧ ನಡೆಸಿದ ಎನ್ಐಎ ನಂತರ ಶೇಖ್ ಸುಲ್ತಾನ್ ಸಲಾಹ್ ಉದ್ದೀನ್ ಅಯೂಬಿ ಅಲಿಯಾಸ್ ಅಯೂಬಿ ಸೇರಿ ಕನಿಷ್ಠ ನಾಲ್ವರನ್ನು ಬಂಧಿಸಿರುವುದಾಗಿ ತಿಳಿಸಿದೆ.