Home » 31 ನಕ್ಸಲರ ಮಾರಣಹೋಮ : ಶಾ ಅಭಿನಂದನೆ
 

31 ನಕ್ಸಲರ ಮಾರಣಹೋಮ : ಶಾ ಅಭಿನಂದನೆ

by Kundapur Xpress
Spread the love

ಹೊಸದಿಲ್ಲಿ: ಛತ್ತೀಸ್‌ಗಢ ಮತ್ತು ತೆಲಂಗಾಣ ಗಡಿಯಲ್ಲಿರುವ ಕುರ್ರಗುಟ್ಟಲು ಬೆಟ್ಟಗಳಲ್ಲಿ ಭದ್ರತಾ ಪಡೆಗಳು 31 ಕುಖ್ಯಾತ ನಕ್ಸಲರನ್ನು ಹೊಡೆದು ಹಾಕಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

‘ಆಪರೇಷನ್ ಬ್ಲ್ಯಾಕ್ ಫಾರೆಸ್ಟ್ ಎಂಬ ಹೆಸರಿನ ಇದೊಂದು ಅತ್ಯಂತ ದೊಡ್ಡ ಕಾರ್ಯಾಚರಣೆ ಎಂದಿರುವ ಅವರು, ಕೇಂದ್ರ ಮೀಸಲು ಪಡೆ, ವಿಶೇಷ ಕಾರ್ಯಪಡೆ ಮತ್ತು ಜಿಲ್ಲಾ ರಿಸರ್ವ್ ಗಾರ್ಡ್‌ಗಳು ಜಂಟಿಯಾಗಿ ಈ ಯಶಸ್ಸು ಸಾಧಿಸಿವೆ ಎಂದಿದ್ದಾರೆ. ಈ ಸಂಬಂಧ ಪೋಸ್ಟ್ ಮಾಡಿರುವ ಅವರು, 21 ದಿನಗಳ ಕಾಲ ಸಿಬ್ಬಂದಿಯು ಸವಾಲಿನ ಭೂ ಪ್ರದೇಶ ಮತ್ತು ಪ್ರತಿಕೂಲ ಹವಾಮಾನ ಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಈ ದಾಳಿ ಮಾಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

 

Related Articles

error: Content is protected !!